UPSC ಯಿಂದ ಐಇಎಸ್, ಐಎಸ್ಎಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ | ಒಟ್ಟು 53 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ|ಅರ್ಜಿ ಸಲ್ಲಿಸಲು ಏಪ್ರಿಲ್ 26 ಕೊನೆ ದಿನ

ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಆರ್ಥಿಕ ಸೇವೆ ಮತ್ತು ಭಾರತೀಯ ಸಂಖ್ಯಾಶಾಸ್ತ್ರ ಸೇವೆ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 53 ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

 

ನೇಮಕಾತಿ ಪ್ರಾಧಿಕಾರ / ಆಯೋಗ: ಕೇಂದ್ರ ಲೋಕಸೇವಾ ಆಯೋಗ

ಹುದ್ದೆಗಳ ಹೆಸರು : ಭಾರತೀಯ ಆರ್ಥಿಕ ಸೇವೆ ಮತ್ತು ಭಾರತೀಯ ಅಂಕಿಅಂಶ ಸೇವೆ ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ : 53

ಭಾರತೀಯ ಆರ್ಥಿಕ ಸೇವೆ : 24

ಭಾರತೀಯ ಅಂಕಿ ಅಂಶ ಸೇವೆ ಹುದ್ದೆಗಳ : 29

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-04-2022

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-04 2022 ರ ಸಂಜೆ 06 ಗಂಟೆವರೆಗೆ.

ಆನ್‌ಲೈನ್ ಅರ್ಜಿ ವಿತ್‌ಡ್ರಾ ಮಾಡಲು ಕೊನೆ ದಿನ : ಮೇ 04 ರಿಂದ 10, 2022 ರ ಸಂಜೆ 06 ಗಂಟೆವರೆಗೆ.

ಅರ್ಜಿ ಶುಲ್ಕ ಪಾವತಿಸಲು (ಆಫ್‌ಲೈನ್) ಕೊನೆ ದಿನಾಂಕ : 25-04-2022 ರ ರಾತ್ರಿ 11-59 ಗಂಟೆವರೆಗೆ

ಯುಪಿಎಸ್‌ಸಿ ಸಿಎಂಎಸ್ ಹುದ್ದೆಗೆ ಪರೀಕ್ಷೆ ದಿನಾಂಕ :24-06-2022

ಯುಪಿಎಸ್‌ಸಿ ಸಿಎಂಎಸ್ ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ: ಜುಲೈ / ಆಗಸ್ಟ್, 2022

ವಿದ್ಯಾರ್ಹತೆ : ಭಾರತೀಯ ಆರ್ಥಿಕ ಸೇವೆ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅಭ್ಯರ್ಥಿಗಳು ಅರ್ಥಶಾಸ್ತ್ರ | ಅಪ್ಲೈಡ್
ಎಕನಾಮಿಕ್ಸ್ / ಬ್ಯುಸಿನೆಸ್ ಎಕನಾಮಿಕ್ಸ್ / ಎಕನಾಮೆಟ್ರಿಕ್ಸ್ ಪೋಸ್ಟ್ ಗ್ರಾಜುಯೇಷನ್ ಪಾಸ್ ಮಾಡಿರಬೇಕು.

ಭಾರತೀಯ ಅಂಕಿಅಂಶ ಸೇವೆ ಹುದ್ದೆಗೆ ಸ್ಟ್ಯಾಟಿಸ್ಟಿಕ್ಸ್ / ಮ್ಯಾಥೆಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ / ಅಪ್ಲೈಡ್ ಸ್ಟ್ಯಾಟಿಸ್ಟಿಕ್ಸ್ ಪದವಿ ಅಥವಾ ಸ್ನಾತಕೋತ್ತರ ಪದವಿ
ತೇರ್ಗಡೆ ಹೊಂದಿರಬೇಕು.

ವಯೋಮಿತಿ :
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ
21ವರ್ಷ ಹಾಗೂ ಗರಿಷ್ಠ 30 ವರ್ಷ ದಾಟಿರಬಾರದು. ದಿನಾಂಕ 02-08-1992 ಕ್ಕಿಂತ ಮೊದಲು ಜನಿಸಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ : ಸಾಮಾನ್ಯ | ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200.
ಮಹಿಳಾ / ಎಸ್ಸಿ / ಎಸ್ಟಿ / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಸಹ ಪಾವತಿ
ಮಾಡಬಹುದು.

Leave A Reply

Your email address will not be published.