ಕೇವಲ 12,000 ರೂ.ಗೆ ಮಗನಿಗೇ ಬೆಂಕಿ ಹಚ್ಚಿದ ತಂದೆ| ಗೋಗೆರದರೂ ಕರುಣೆ ತೋರದ ಅಪ್ಪ!

ತಾನೇ ಸಾಕಿ ಬೆಳೆಸಿದ ಮಗನನ್ನು ತಂದೆಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ಸಿಲಿಕಾನ್ ಸಿಟಿಯನ್ನು ಬೆಚ್ಚಿಬಿಳಿಸಿದೆ.

 

ಮಗ 12 ಸಾವಿರ ರೂಪಾಯಿ ಹಣ ಕಳೆದುಕೊಂಡಿರುವುದೇ ಈ ಕೃತ್ಯ ಕ್ಕೆ ಕಾರಣ. ಸ್ವಂತ ಮಗನ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಈ ಘಟನೆ ನಗರದ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ.

ಆಜಾದ್ ನಗರದ ನಿವಾಸಿ ಸುರೇಂದ್ರ ಅವರ ಮಗನೇ ಅರ್ಪಿತ್. ಕಳೆದ ವಾರ ಅರ್ಪಿತ್ 12 ಸಾವಿರ ರೂ. ಕಳೆದುಕೊಂಡಿದ್ದರು. ಇದರಿಂದ ಕೋಪಗೊಂಡ ಸುರೇಂದ್ರ ಅವರು ಮನೆಯೊಳಗೆ ತಮ್ಮ ಮಗನ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ಪೆಟ್ರೋಲ್ ಸುರಿದಿದ್ದರಿಂದ ಅರ್ಪಿತ್ ಮನೆಯಿಂದ ಹೊರಗೆ ಬಂದಿದ್ದಾನೆ. ಈ ವೇಳೆ ಅರ್ಪಿತ್ ತನ್ನ ತಂದೆಗೆ ಬೇಡಿಕೊಂಡಿದ್ದಾರೆ. ಆದ್ರೂ ಸಹಿತ ಸುರೇಂದ್ರ ತನ್ನ ಮಗನ ಮೇಲೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾನೆ. ಮೊದಲನೇ ಬಾರಿ ಬೆಂಕಿ ಹೊತ್ತದ ಕಾರಣ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಬಳಿಕ ಅರ್ಪಿತ್ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ನಗರದ ತುಂಬೆಲ್ಲಾ ಓಡಾಡಿದ್ದಾನೆ.

ಮಗ ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಮಾಡಿದ್ದ ಸಿಟ್ಟು ತಂದೆಗಿತ್ತು. ಸುಮಾರು 1.5 ಕೋಟಿಗೆ ಲೆಕ್ಕ ವ್ಯವಹಾರದ ಲೆಕ್ಕ ಮಗ ನೀಡಿರಲಿಲ್ಲ. ಈ ಬಗ್ಗೆ ಅಪ್ಪ ಮಗನ ಮಧ್ಯೆ ಕಳೆದ ಶುಕ್ರವಾರ ಮಧ್ಯಾಹ್ನ ಗಲಾಟೆ ನಡೆದಿತ್ತು. ಬಿಸಿನೆಸ್ ಮೆಟಿರಿಯಲ್ ಇಟ್ಟಿದ್ದ ಗೋಡೌನ್ ನಲ್ಲಿಯೇ ಕೆಲಸಗಾರರ ಮುಂದೆಯೇ ಈ ಗಲಾಟೆ ನಡೆದಿತ್ತು. ಮಾತಿನ ಚಕಮಕಿ ವೇಳೆ ಸಾಯಿಸ್ತೀಯಾ ಸಾಯಿಸು ನೋಡೋಣ ಎಂದು ಅಪ್ಪನಿಗೆ ಸವಾಲ್ ಹಾಕಿದ್ದ ಅರ್ಪಿತ್. ಲೆಕ್ಕ ಕೊಟ್ರು ಸಾಯಿಸ್ತೀಯಾ.. ಲೆಕ್ಕ ನೀಡದಿದ್ರೂ ಸಾಯಿಸ್ತೀಯ. ನಾನು ಲೆಕ್ಕ ಕೊಡಲ್ಲ ಎಂದಿದ್ದ ಅರ್ಪಿತ್. ಸಿಟ್ಟುಗೊಂಡ ತಂದೆ ಇದೇ ವೇಳೆ ಗೋಡೌನ್ ನಲ್ಲಿ ಇದ್ದ ಥಿನ್ನರ್ ಎರಚಿ ಬೆಂಕಿ ಇಟ್ಟಿದ್ದಾನೆ.

ಅರ್ಪಿತ್ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು. ಬಳಿಕ ಸ್ಥಳೀಯರು ಬೆಂಕಿ ನಂದಿಸಿ ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅರ್ಪಿತ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅರ್ಪಿತ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಅಮಾನವೀಯ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಸುರೇಂದ್ರನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.