ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಉಚ್ಚಿಲ ಪದಚ್ಯುತಿ!! ಎರಡು ಬಾರಿ ಅಧ್ಯಕ್ಷನಾಗಿದ್ದರೂ ಆದೇಶ ಹೊರಡಿಸಿದ ಕಾರಣ ನಿಗೂಢ!!?

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ರಾಜ್ಯ ಪಾಲರ ಆದೇಶದ ಪ್ರಕಾರ ದಿಢೀರ್ ಪದಚ್ಯುತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಉಪಾಧ್ಯರಾಗಿ ಪಕ್ಷ ಮುನ್ನಡೆಸಿದ್ದ ಉಚ್ಚಿಲ ಅವರಿಗೆ ಎರಡು ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಡಲಾಗಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಕಾರಣ ತಿಳಿದಿಲ್ಲ, ಎರಡು ಬಾರಿ ಅಧ್ಯಕ್ಷನಾಗಿ ಉತ್ತಮ ಕಾರ್ಯ ನಡೆಸಿ ಮುನ್ನಡೆಸಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉಚ್ಚಿಲ ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.