PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ಯಲ್ಲಿ ಉದ್ಯೋಗ |ಇಂಟರ್ ನಲ್ ಒಂಬುಡ್ಸ್ ಮೆನ್ ಹುದ್ದೆಗೆ ಅರ್ಜಿ ಆಹ್ವಾನ| ಮಾಸಿಕ ರೂ.1,25,000/- ವೇತನ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಮೂಲಕ ಆಂತರಿಕ ಒಂಬುಡ್ಸ್ ಮನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

 

ಭಾರತದಾದ್ಯಂತ ಖಾಲಿ ಇರುವ ಕೆಲ ಆಂತರಿಕ ಓಂಬುಡ್ಸ್‌ಮನ್ ಹುದ್ದೆಗಳ ಭರ್ತಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 7 ವರ್ಷದ ಅನುಭವವಿರಬೇಕು ಹಾಗೂ ವಯಸ್ಸು 65 ವರ್ಷ ದಾಟಿರಬಾರದು. ಇನ್ನು ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.1,25,000/- ವೇತನ ನೀಡಲಾಗುತ್ತದೆ.

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-04-2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-04-2022

ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಉದ್ಯೋಗ ಸ್ಥಳ : ಭಾರತದಾದ್ಯಂತ

ಹುದ್ದೆಯ ಹೆಸರು : ಆಂತರಿಕ ಓಂಬುಡ್ಸ್‌ಮನ್

ವೇತನ : ರೂ.1,25,000/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ : ಹುದ್ದೆ ಅನುಸಾರ

ಅನುಭವ : 7 ವರ್ಷ

ವಯೋಮಿತಿ ; ಗರಿಷ್ಠ ವಯಸ್ಸು 65 ವರ್ಷ

ಅರ್ಜಿ ಶುಲ್ಕ : 2000/-

ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

ಆಯ್ಕೆ ಪ್ರಕ್ರಿಯೆ : ವೈಯಕ್ತಿಕ ಸಂವಹನ ಮತ್ತು ಸಂದರ್ಶನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕ ಅಧಿಸೂಚನೆಯ ಪ್ರಕಾರ 31-03-2022 ರಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್-HRMD, ಪಂಜಾಬ್ ನ್ಯಾಷನಲ್ ಬ್ಯಾಂಕ್, HO: HRMD, ಸೆಕ್ಟರ್-10, ದ್ವಾರಕಾ, ನವದೆಹಲಿ-110075 ಗೆ ಕಳುಹಿಸಬೇಕಾಗುತ್ತದೆ.

Leave A Reply

Your email address will not be published.