ವಿಟ್ಲ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ!! ಪೊಲೀಸರ ದಾಳಿ-ಮೂವರ ಬಂಧನ

ವಿಟ್ಲ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೋಲೀಸರು ಮೂವರು ಆರೋಪಿ ಗಳ ಸಹಿತ ಒಟ್ಟು ಸಾವಿರಾರು ರೂ ಮೌಲ್ಯದ ವಿವಿಧ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ಕುದ್ರಿಯಾ ಎಂಬಲ್ಲಿ ನಡೆದಿದೆ.

 

ಆರೋಪಿಗಳಾದ ಕರುಣಾಕರ, ಶರತ್ ಕುಮಾರ್, ಅವಿನಾಶ್ ಬಂಧಿತರು, ಬಂಧಿತರಿಂದ 10 ಸಾವಿರ ಮೌಲ್ಯದ ಲ್ಯಾಪ್ ಟಾಪ್, 15.500 ಸಾವಿರ ನಗದು, ಕೀಪ್ಯಾಡ್ ಮೊಬೈಲ್ ಐದು, ಆರು ಸ್ಮಾರ್ಟ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಎ.4 ರ 9.45 ರ ಸುಮಾರಿಗೆ ಕುದ್ರಿಯಾದಲ್ಲಿ ಹಣ ಪಣಕ್ಕಿಟ್ಟು, ಐಪಿ.ಎಲ್ ಕ್ರಿಕೆಟ್ ಪಂದ್ಯಾಟದ ಬೆಟ್ಟಿಂಗ್ ನಡೆಸುತ್ತಿದ್ದ ಕುರಿತು ಮಾಹಿತಿ ಬಂದ ಮೇರೆಗೆ ವಿಟ್ಲ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಅವರ ಮಾರ್ಗದರ್ಶನ ದಂತೆ ಎಸ್.ಐ.ಸಂದೀಪ್ ಕುಮಾರ್ ಶೆಟ್ಟಿ ನೇತ್ರತ್ವದ ತಂಡ ದಾಳಿ ನಡೆಸಿ ವಿಚಾರಿಸಿದಾಗ ಲಕ್ಕೂ ಹಾಗೂ ಹೈದರಾಬಾದ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದು ಬೆಟ್ಟಿಂಗ್ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಪೊಲೀಸರು ಆರೋಪಿಗಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.