ಮಂಗಳೂರು:ಬಗೆದಷ್ಟು ಬಿಚ್ಚುತ್ತಿದೆ ವೇಶ್ಯವಾಟಿಕೆಯ ಕರಾಳ ಮುಖ!! ಮತ್ತೆ ಮೂವರ ಬಂಧನ
ಮಂಗಳೂರು: ಕೆಲ ದಿನಗಳ ಹಿಂದೆ ನಂದಿಗುಡ್ಡೆಯ ರೆಸಿಡೆನ್ಸಿ ಒಂದರಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ನಡೆಸುತ್ತಿದ್ದ ಅಕ್ರಮ ವೇಶ್ಯವಾಟಿಕೆ ಅಡ್ಡೆಗೆ ವಿದ್ಯಾರ್ಥಿನಿಯೊಬ್ಬಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಪಿಂಪ್ ಗಳ ಸಹಿತ ಕೆಲವರ ಬಂಧಿಸಲಾಗಿತ್ತು. ಆ ಬಳಿಕ ತನಿಖೆ ತೀವ್ರಗೊಳಿಸಿದ್ದ ಪೊಲೀಸರು ಇನ್ನಷ್ಟು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ರಾಜಕೀಯ ನಾಯಕರೊಬ್ಬರ ಬಲಗೈ ಬಂಟ, ಮಂಗಳೂರು ಕಮಿಷನರ್ ಅವರ ಆಪ್ತನ ಸಹಿತ 16 ಮಂದಿಯನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು.
ಆದರೂ ಹಠ ಬಿಡದ ಪೊಲೀಸ್ ಪಡೆ ಜಾಲದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಪ್ರಕರಣವನ್ನು ಇನ್ನಷ್ಟು ಬಗೆದಿದೆ. ಬಗೆದಷ್ಟೂ ಹಲವು ಹಿನ್ನೆಲೆಗಳು ಹುಟ್ಟಿಕೊಂಡಿದ್ದು,ಮತ್ತೆ ಮೂವರು ಆರೋಪಿಗಳ ಬಂಧಿಸಲಾಗಿದೆ.ಬಂಧಿತರೆಲ್ಲರೂ ಮಂಗಳೂರು ಹೊರವಲಯದ ಮೂಡಬಿದ್ರೆ, ಉಳ್ಳಾಲ, ಕಾಸರಗೋಡಿನವರಾಗಿದ್ದು ಉದ್ಯಮಿಗಳಾಗಿಯೂ, ರಾಜಕೀಯ ನಾಯಕರುಗಳ ಸಹವಾರ್ಥಿಗಳಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನ ಎಲ್ಲಾ ಕಾಲೇಜುಗಳ ಮೇಲೂ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದ್ದು ಐಶಾರಾಮಿ ಜೀವನದ ರುಚಿ ತೋರಿಸಿ ನರಕಕ್ಕೆ ತಳ್ಳುವ ಕಾಮುಕರ ಆಟಕ್ಕೆ ಬ್ರೇಕ್ ಬೀಳಲಿದೆ.
ಮಂಗಳೂರಿನಲ್ಲಿ ಅಕ್ರಮ ವೇಶ್ಯವಾಟಿಕೆ ಇಂದು ನಿನ್ನೆಯದಲ್ಲ
ಮಂಗಳೂರು ಎಲ್ಲಾ ವಿಚಾರದಲ್ಲೂ ಹೆಸರುವಾಸಿಯಾದ ನಗರ. ಕೊಲೆ,ಸುಲಿಗೆ,ದೊಂಭಿ ಗಲಭೆ,ಕೋಮು ಸಂಘರ್ಷ ಹೀಗೆ ಹತ್ತು ಹಲವು ಘಟನೆಗಳು ಮಂಗಳೂರಿನಲ್ಲಿ ಹಿಂದಿನಿಂದಲೂ ನಡೆದು ಬಂದಿತ್ತು.ಕೆಲ ವರ್ಷಗಳ ಹಿಂದೆ ನಗರದ ಕೆಲ ಲಾಡ್ಜ್ ಗಳಲ್ಲಿ ಪೊಲೀಸರಿಗೆ ಇಂತಿಷ್ಟು ಮಾಮೂಲು ನಿಗದಿಪಡಿಸಿ ಹಸಿ ಮಾಂಸದ ದಂಧೆ ಶುರುಮಾಡಲಾಗಿತ್ತು. ಹಿರಿಯ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎನ್ನುವ ಮಾಹಿತಿಯನ್ನು ಕೆಲ ಕಿರಿಯ ಸಿಬ್ಬಂದಿಗಳೇ ನೀಡಿ ದಾಳಿಯ ಸಮಯದಲ್ಲಿ ಕುರುಹುಗಳು ಪತ್ತೆಯಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದರು.
ವಾರಕ್ಕೆ,ತಿಂಗಳಿಗೆ ಇಂತಿಷ್ಟರಂತೆ ಜೇಬು ತುಂಬಿಸಿಕೊಳ್ಳುತ್ತಿದ್ದ ಪೊಲೀಸ್ ಸಿಬ್ಬಂದಿಗಳು ತಮ್ಮ ಚಪಲ ತೀರಿಸಲು ಅವರುಗಳನ್ನೇ ಅವಲಂಬಿಸುತ್ತಿದ್ದರು ಎನ್ನುವ ಮಾತೂ ಕೇಳಿ ಬಂದಿತ್ತು.