ಬರೋಬ್ಬರಿ 80 ಲಕ್ಷಕ್ಕೆ ಸೇಲಾದ ಬೀದಿ ಕಲಾವಿದನ ಕಲಾಕೃತಿ | ಇಷ್ಟು ಮೊತ್ತದ ಹಣವನ್ನು ಈ ಕಲಾವಿದ ಯಾರಿಗೆ ಕೊಟ್ಟ ಅನ್ನುವುದೇ ಕುತೂಹಲ ಸಂಗತಿ !
ಈ ಕಲಾವಿದ ಯುಕೆಯವನು. ಯುಕೆಯ ಬ್ರಿಸ್ಟಲ್ ಮೂಲದ ಬೀದಿ ಕಲಾವಿದನ ಕಲಾಕೃತಿ ಇತ್ತೀಚೆಗೆ ಸುಮಾರು 81,000 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಲಕ್ಷ ರೂ. ಗೂ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಇಷ್ಟೊಂದು ದುಡ್ಡು ಬಂದರೂ ಈ ಮೊತ್ತವನ್ನು ರಷ್ಯಾ – ಉಕ್ರೇನ್ ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಉಕ್ರೇನಿನ ಕೀವ್ ನಲ್ಲಿರುವ ಮಕ್ಕಳ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅನಾಮಿಕ ದಾನಿಯೊಬ್ಬರು ತಮ್ಮ ಬಳಿಯಿದ್ದ ಬ್ಯಾಂಕ್ಸಿ ಅವರ ವರ್ಣ ಕಲಾಕೃತಿಯೊಂದನ್ನು ಮಕ್ಕಳ ಆಸ್ಪತ್ರೆಗಾಗಿ ಚಂದಾ ಹಣ ಹೊಂದಿಸಲೆಂದು ಬಿಟ್ಟುಕೊಟ್ಟಿದ್ದರು. ಅವರ ಆ ಕಲಾಕೃತಿಯು ಬ್ಯಾಂಕ್ಸಿ ಅವರ ಪ್ರತಿಭೆಯಿಂದ ನಿರ್ಮಾಣವಾದ ಇಬ್ಬರು ಸೈನಿಕರನ್ನು ಹೊಂದಿದೆ. ಮೂಲತಃ ಈ ಕಲಾಕೃತಿಯು 2005ರ ಸಂದರ್ಭದಲ್ಲಿ ರಚಿಸಲಾಗಿದ್ದು ಅದರಲ್ಲಿ ಕ್ಯಾಂಪೇನ್ ಫಾರ್ ನ್ಯೂಕ್ಲಿಯರ್ ಡಿಸಾರ್ಮಮೆಂಟ್ ಅನ್ನು ಚಿತ್ರೀಕರಿಸಲಾಗಿತ್ತು.
ಈ ಕಲಾವಿದ ಯುಕೆಯವನು. ಯುಕೆಯ ಬ್ರಿಸ್ಟಲ್ ಮೂಲದ ಬೀದಿ ಕಲಾವಿದ ಬ್ಯಾಂಕ್ಸಿ ಅವರ ಒಂದು ಕಲಾಕೃತಿ ಇತ್ತೀಚೆಗೆ ಸುಮಾರು 81,000 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಲಕ್ಷ ರೂ. ಗೂ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಇಷ್ಟೊಂದು ದುಡ್ಡು ಬಂದರೂ ಈ ಮೊತ್ತವನ್ನು ರಷ್ಯಾ – ಉಕ್ರೇನ್ ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಉಕ್ರೇನಿನ ಕೀವ್ ನಲ್ಲಿರುವ ಮಕ್ಕಳ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.