“ರಾಕಿ ಭಾಯ್” ಸಿಡಿಲಬ್ಬರಕ್ಕೆ ಹಳೆ ದಾಖಲೆಗಳೆಲ್ಲಾ ಉಡೀಸ್ !! | 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದು‌ ಇತಿಹಾಸ ಸೃಷ್ಟಿಸಿದ “ಕೆಜಿಎಫ್ ಚಾಪ್ಟರ್ 2” ಟ್ರೈಲರ್

ಕನ್ನಡ ಚಿತ್ರರಂಗ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಗಳನ್ನೆಲ್ಲ ಚಿಂದಿಚಿಂದಿ ಮಾಡಿ ಹಾಕಿದೆ. ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಮಾರ್ಚ್ 27ರಂದು ಬಿಡುಗಡೆಯಾಗಿದ್ದು, 24 ಗಂಟೆಗಳಲ್ಲಿ ಯಾರು ಬರೆಯದ ಹೊಸ ದಾಖಲೆಯನ್ನೇ ಬರೆದಿದೆ.

 

ಕೆಜಿಎಫ್ 2 ಟ್ರೈಲರ್

ಕೆಜಿಎಫ್ 2 ಸಿನಿಮಾ ತೆರೆಗೆ ಬರಲು ಕೆಲವೇ ಕೆಲವು ದಿನಗಳು ಬಾಕಿ ಇವೆ. ಏಪ್ರಿಲ್ 14 ರಂದು ಅದ್ದೂರಿಯಾಗಿ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದೆ. ಈ ಮಧ್ಯೆ ಚಿತ್ರದ ಟ್ರೈಲರ್ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿ, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟ್ರೈಲರ್ ಮೂಲಕವೇ ಹೊಸ ಇತಿಹಾಸ ಸೃಷ್ಟಿಸಿರುವ ‘ರಾಕಿ ಭಾಯ್’ ಅಬ್ಬರವನ್ನು ಚಿತ್ರಮಂದಿರದಲ್ಲಿ ನೋಡಲು ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಭಾನುವಾರ ಸಂಜೆ 6.40ಕ್ಕೆ ಕೆಜಿಎಫ್ ಚಾಪ್ಟರ್ 2 ಟ್ರೈಲರ್‌ ಐದು ಭಾಷೆಗಳಲ್ಲಿ ರಿಲೀಸ್‌ ಆಯ್ತು. ಟ್ರೈಲರ್‌ ರಿಲೀಸ್ ಆಗಿ 24 ಗಂಟೆ ಕಳೆಯುವುದರೊಳಗೆ ಎಲ್ಲ ಹಳೆಯ ದಾಖಲೆಗಳನ್ನು ಉಡೀಸ್‌ ಮಾಡಿ, ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಕೆಜಿಎಫ್ 2 ಐದು ಭಾಷೆಗಳ ಟ್ರೈಲರ್ ವೀವ್ಸ್ 109 ಮಿಲಿಯನ್ ಗಡಿ ದಾಟಿದೆ. ಕನ್ನಡ 18 ಮಿಲಿಯನ್, ತೆಲುಗು 20 ಮಿಲಿಯನ್, ಹಿಂದಿ 51 ಮಿಲಿಯನ್, ತಮಿಳು 12 ಮಿಲಿಯನ್ ಹಾಗೂ ಮಲಯಾಳಂ 8 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ‘ಆರ್‌ಆರ್‌ಆರ್‌’, ‘ರಾಧೆ ಶ್ಯಾಮ್’ ನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ ಕೆಜಿಎಫ್ ಮುನ್ನುಗುತ್ತಿದೆ. ರಾಜಮೌಳಿ ನಿರ್ದೇಶನದ RRR ಐದು ಭಾಷೆಯ ಟ್ರೇಲರ್‌ಗಳಿಗೆ 24 ಗಂಟೆಯಲ್ಲಿ 51 ಮಿಲಿಯನ್ ವೀವ್ಸ್ ಸಿಕ್ಕಿತ್ತು. ಹಾಗೆಯೇ, ರಾಧೆ ಶ್ಯಾಮ್ ಸಿನಿಮಾದ ಐದು ಭಾಷೆಯ ಟ್ರೈಲರ್‌ಗಳು 24 ಗಂಟೆಯಲ್ಲಿ 57 ಮಿಲಿಯನ್ ವೀವ್ಸ್ ಸಿಕ್ಕಿತ್ತು. ಕೆಜಿಎಫ್ 2 ಚಿತ್ರದ ಐದು ಭಾಷೆಗಳ ಟ್ರೈಲರ್‌ಗೆ 109 ಮಿಲಿಯನ್ ವೀವ್ಸ್ ಸಿಕ್ಕಿರುವುದು ಹೊಸ ರೆಕಾರ್ಡ್‌ ಸೃಷ್ಟಿಸಿದೆ.

Leave A Reply

Your email address will not be published.