ಪಿಯುಸಿ ಪಾಸಾದವರಿಗೆ ಉದ್ಯೋಗವಕಾಶ | ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳು | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ
ಭಾರತೀಯ ಮಿಲಿಟರಿ ಸೇವೆಗಳಲ್ಲಿ ಒಂದಾಗಿರುವ ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆರ್ಟಿಫೀಷರ್ ಅಪ್ರೆಂಟಿಸ್ (ಎಎ) ಮತ್ತು ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (ಎಸ್ಎಸ್ಎಆರ್) ಪದನಾಮಗಳ ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು
ಈ ಹುದ್ದೆಗಳನ್ನು 2022 ರ ಆಗಸ್ಟ್‌ನಲ್ಲಿ ಆರಂಭವಾಗಲಿರುವ ಬ್ಯಾಚ್ ಕೋರ್ಸ್‌ಗೆ, ಅವಿವಾಹಿತ ಪುರುಷ ಅಭ್ಯರ್ಥಿಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಹೆಸರು : ಆರ್ಟಿಫಿಷರ್ ಅಪ್ರೆಂಟಿಸ್ (ಎಎ) ಮತ್ತು ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (ಎಸ್ಎಸ್ಎಆರ್) / ನಾವಿಕ
ಹುದ್ದೆಗಳ ಸಂಖ್ಯೆ : 2500
ಅಪ್ಲಿಕೇಶನ್ ಸಲ್ಲಿಸಲು ಆರಂಭ ದಿನಾಂಕ: 29-03-2022
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 05-04-2022
ಪರೀಕ್ಷೆ ದಿನಾಂಕ : ಮೇ / ಜೂನ್ 2022
ವಿದ್ಯಾರ್ಹತೆ : ಆರ್ಟಿಫೀಷರ್ ಅಪ್ರೆಂಟಿಸ್(AA) ಹುದ್ದೆಗೆ ಅಭ್ಯರ್ಥಿಗಳು ಶೇಕಡ.60 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯ ಜತೆಗೆ ರಸಾಯನಶಾಸ್ತ್ರ / ಬಯೋಲಜಿ /ಕಂಪ್ಯೂಟರ್ ಸೈನ್ಸ್ ಯಾವುದಾದರು ಒಂದು ವಿಷಯದಲ್ಲಿ ಪಾಸಾಗಿರಬೇಕು.
ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (SSR) : ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಣಿತ ಬಯೋಲಜಿ / ಕಂಪ್ಯೂಟರ್ ಸೈನ್ಸ್ ಯಾವುದಾದರು ಒಂದು ವಿಷಯ ಓದಿರಬೇಕು.
MHRD ಇಂದ ಅಂಗೀಕೃತಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಓದಿರಬೇಕು.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ರುಪೇ ಕಾರ್ಡ್‌ಗಳ ಮೂಲಕ ಪಾವತಿಸಬಹುದು.
ದೈಹಿಕ ಸಾಮರ್ಥ್ಯ ಅರ್ಹತೆಗಳು : ಅರ್ಜಿ ಸಲ್ಲಿಸುವ ಪುರುಷ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರವಿರಬೇಕು.
ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಮೊದಲಿಗೆ www.joinindiannavy.gov.in ಭೇಟಿ ನೀಡಿ, ಇ-ಮೇಲ್ ಐಡಿ ಮೂಲಕ ರಿಜಿಸ್ಟರ್ ಆಗಬೇಕು.
-ಅನಂತರ ರಿಜಿಸ್ಟರ್ ಇ-ಮೇಲ್ ಐಡಿ ಮೂಲಕ ಲಾಗಿನ್ ‘ಕರೆಂಟ್ ಒಪೊರ್ಚಿನಿಟೀಸ್’ ಕ್ಲಿಕ್ ಮಾಡಿ.
‘ಅಪ್ಲೈ’ ಬಟನ್ ಮೇಲೆ ಕ್ಲಿಕ್ ಮಾಡಿ.
ಅಗತ್ಯ ಮಾಹಿತಿಗಳನ್ನು ತಪ್ಪದೇ ಭರ್ತಿ ಮಾಡಿ ಮತ್ತು ಸ್ಕ್ಯಾನ್ ಕಾಪಿಗಳನ್ನು ಅಪ್‌ಲೋಡ್ ಮಾಡಿ.
ಭರ್ತಿ ಮಾಡಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಅರ್ಹತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.