ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಪತ್ತೆ | ಆಘಾತಕಾರಿ ಮಾಹಿತಿ ಬಹಿರಂಗ

ಅಧ್ಯಯನವೊಂದರ ಪ್ರಕಾರ ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳ ಅಂಶವಿರುವುದು ಬಹಿರಂಗವಾಗಿದೆ. ನೆದರ್ಲೆಂಡ್‌ನ ವಿಜ್ಞಾನಿಗಳ ತಂಡವು ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ.

 

ಶೇ. 77ರಷ್ಟು ಜನರ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಪತ್ತೆಯಾಗಿದೆ.
ಮನುಷ್ಯರ ದೇಹದಲ್ಲಿನ ಈ ಪ್ಲಾಸ್ಟಿಕ್ ಕಣಗಳು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು ಎಂಬುದು ಕೂಡ ಆಘಾತಕಾರಿ ಮಾಹಿತಿ ಕೂಡಾ ಅಧ್ಯಯನದಲ್ಲಿ ಬಯಲಾಗಿದೆ. ಅಧ್ಯಯನಕ್ಕಾಗಿ 5 ಬಗೆಯ ಪ್ಲಾಸ್ಟಿಕ್‌ಗಳ ಪರೀಕ್ಷೆಗೆ ಒಳಪಡಿಸಲಾಗಿದೆ. 22 ಜನರ ರಕ್ತದ ಮಾದರಿಗಳನ್ನು ಐದು ರೀತಿಯ ಪ್ಲಾಸ್ಟಿಕ್‌ಗಳಾದ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್, ಪಾಲಿಮಿಥೈಲ್ ಮೆಥಾಕ್ಸಿಲೇಟ್, ಪಾಲಿಥಿಲೀನ್ ಮತ್ತು ಪಾಲಿಥಿಲೀನ್ ಟೆರೆಫ್ಲಾಲೇಟ್ (ಪಿಇಟಿ) ಪರೀಕ್ಷೆಗೆ ಬಳಸಿಕೊಳ್ಳಲಾಗಿತ್ತು.

22 ರಕ್ತದಾನಿಗಳಲ್ಲಿ 17 ಮಂದಿ ತಮ್ಮ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿದೆ. ಇದು ಸಂಶೋಧಕರನ್ನು ಆಘಾತಗೊಳಿಸಿದೆ.

ಪಿಇಟಿ ನಂತರ ಮಾನವನ ರಕ್ತದ ಮಾದರಿಗಳಲ್ಲಿ ಪಾಲಿಸ್ಟೈರೀನ್ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಎರಡನೇ ವಿಧದ ಪ್ಲಾಸ್ಟಿಕ್ ಕಂಡು ಬಂದಿದೆ. ಈ ರೀತಿಯ ಪ್ಲಾಸ್ಟಿಕ್ ಅನ್ನು ವಿವಿಧ ರೀತಿಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಲು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ವಿಜ್ಞಾನಿಗಳು ರಕ್ತದಲ್ಲಿ ಕಂಡುಕೊಂಡ ಮೂರನೇ ರೀತಿಯ ಪ್ಲಾಸ್ಟಿಕ್ ಪಾಲಿಥಿಲೀನ್. ಇದನ್ನು ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗ್‌ಗಳನ್ನು ಉತ್ಪಾದಿಸಲು
ಬಳಸಲಾಗುತ್ತದೆ.

ಅಧ್ಯಯನದ ಪ್ರಕಾರ, ಶೇ. 50ರಷ್ಟು ಜನರ ರಕ್ತದಲ್ಲಿ ಪಾಲಿಥಿಲೀನ್ ಟೆರೆಫ್ಲಾಲೇಟ್ ಕಂಡುಬಂದಿದೆ. ಆದರೆ, ಪಾಲಿಸ್ಟೈರೀನ್ ಶೇ. 36ರಷ್ಟು ಜನರ ರಕ್ತದಲ್ಲಿ ಕಂಡುಬಂದಿದೆ.

Leave A Reply

Your email address will not be published.