ವಿಟ್ಲ-ಮಂಗಳೂರು ಸಂಚಾರದ ಮೆರ್ಸಿ ಬಸ್ ಆರ್ ಟಿ ಓ ಅಧಿಕಾರಿಗಳ ವಶಕ್ಕೆ!! ಸೂಕ್ತ ದಾಖಲೆಗಳಿಲ್ಲ-ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ

ವಿಟ್ಲ : ಆರ್ ಟಿ ಒ ಅಧಿಕಾರಿಗಳ ನೇತೃತ್ವದ ತಂಡ ಎಫ್ ಸಿ ( ಫಿಟ್ನೆಸ್ ಸರ್ಟಿಫಿಕೇಟ್) ಇಲ್ಲದ ಕಾರಣಕ್ಕಾಗಿ ಖಾಸಗಿ ಬಸ್ ನ್ನು ವಶಪಡಿಸಿಕೊಂಡ ಘಟನೆಯೊಂದು ನಡೆದಿದೆ.

 

ವಿಟ್ಲ ಮೆರ್ಸಿ ಖಾಸಗಿ ಬಸ್ ತಪಾಸಣೆ ವೇಳೆ ಎಫ್ ಸಿ ಸೇರಿದಂತೆ ಸೂಕ್ತ ದಾಖಲೆಗಳು ಇಲ್ಲದೇ ಇರುವುದು ಕಂಡು ಬಂದಿರುವುದರಿಂದ ಬಸ್ಸನ್ನು ಆರ್ ಟಿ ಒ ಅಧಿಕಾರಿಗಳು ವಶಪಡಿಸಿಕೊಂಡು, ವಿಟ್ಲ ಪೊಲೀಸರಿಗೆ ಒಪ್ಪಿಸಿದ ಪ್ರಕರಣ ನಡೆದಿದೆ.

ಆರ್ ಟಿ ಒ ಅಧಿಕಾರಿ ಚರಣ್ ಇವರ ನೇತೃತ್ವದ ತಂಡ ಈ ತಪಾಸಣೆ ಕೆಲಸ ಕೈಗೊಂಡಿದ್ದು, ಈ ರೀತಿ ಹಲವು ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಜನರ ಜೀವದ ಜೊತೆ ಚೆಲ್ಲಾಟವಾಡುವ ಈ ಖಾಸಗಿ ಬಸ್ ಗಳ ಮೇಲೆ ಆರ್ ಟಿ ಒ ಅಧಿಕಾರಿಗಳ ಹದ್ದಿನ ಕಣ್ಣು ಬಿದ್ದಿರುವುದು ಶ್ಲಾಘನೀಯ.

Leave A Reply

Your email address will not be published.