ಕೆಯ್ಯೂರು-ಮಾಡಾವು ವರ್ತಕರ ಸಂಘದ ಪದಾಧಿಕಾರಿ ರಾಜೀನಾಮೆ

Share the Article

ಪುತ್ತೂರು: ಕೆಯ್ಯೂರು-ಮಾಡಾವು ವರ್ತಕ ಸಂಘದ ಕೋಶಾಧಿಕಾರಿ ಸುಶೀಲಾ ಚಂದ್ರಶೇಖರ ಅವರು ತನ್ನ ರಾಜೀನಾಮೆಯನ್ನು ಸಂಘದ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ.

ವರ್ತಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಗೌರವಾಧ್ಯಕ್ಷರು ಏಕಪಕ್ಷೀಯವಾಗಿ ಕೆಲವೊಂದು ನಿಯಮಗಳನ್ನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ

ಇಂತಹ ಏಕಪಕ್ಷೀಯ ನಿರ್ಧಾರಗಳು ತನಗೆ ಹಾಗೂ ಇತರ ಸದಸ್ಯರಿಗೆ ಇರುಸುಮುರುಸು ಉಂಟಾಗಿದೆ ಎಂದು ಸುಶೀಲಾ ಚಂದ್ರಶೇಖರ ಅವರು ಅಭಿಪ್ರಾಯಿಸಿದ್ದಾರೆ.

ಇತರ ಸದಸ್ಯರೂ ಏಕಪಕ್ಷೀಯ ನಿರ್ಧಾರದ ವಿರುದ್ಧ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply