ರಾಜಧಾನಿಯಲ್ಲಿ ಜೀವಂತ ಹೃದಯ ರವಾನೆ ; ಹೃದಯ ದಾನ ಮಾಡಿದ ಯುವಕ

ಹೃದಯ ಪರಮಾತ್ಮನ ಆತ್ಮ. ಹೃದಯ ನಿಂತರೆ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಅಂತಹ ಅಮೂಲ್ಯ ಹೃದಯದ ರವಾನೆ ಒಬ್ಬರಿಂದ ಇನ್ನೊಬ್ಬರಿಗೆ ಮಾಡಿ ಜೀವವನ್ನು ಬದುಕಿಸುವ ಪುಣ್ಯ ಕಾರ್ಯ ಆಗಾಗ ನಡೆಯುತ್ತಿರುತ್ತದೆ.

 

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಆಸ್ಟರ್ ಆಸ್ಪತ್ರೆಯಿಂದ ಆಯಂಬುಲೆನ್ಸ್ ಮೂಲಕ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಜೀವಂತ ಹೃದಯವನ್ನು ಇಂದು ರವಾನೆ ಮಾಡಲಾಯಿತು. ಇದಕ್ಕಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ರಾಮಯ್ಯ ಆಸ್ಪತ್ರೆ ವೈದ್ಯರ ತಂಡದಿಂದ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ನಡೆದಿದೆ.‌ 

ಕೋಲಾರ ಮೂಲದ 38 ವರ್ಷದ ಯುವಕನ ಹೃದಯವನ್ನು 58 ವರ್ಷ ವಯಸ್ಸಿನ ಪುರುಷರೊಬ್ಬರಿಗೆ ಹೃದಯ ಕಸಿ ಮೂಲಕ ಅಳವಡಿಸಲಾಗಿದೆ. ರಸ್ತೆ ಅಪಘಾತದಲ್ಲಿ 38 ವರ್ಷದ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕನ ಬ್ರೈನ್ ಡೆಡ್ ಆಗಿ ಮೃತಪಟ್ಟಿದ್ದ. ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಮಾಡಲಾಯಿತು. ಹಾಗಾಗಿ, ಯುವಕನ ಹೃದಯವನ್ನು ಬೇರೆಯವರಿಗೆ ವರ್ಗಾವಣೆ ಮಾಡಲಾಗಿದೆ.‌

Leave A Reply

Your email address will not be published.