ದೀದಿ ಸರ್ಕಾರದ ಪಶ್ಚಿಮ ಬಂಗಾಳದಲ್ಲಿ ಎಂಟು ಮಂದಿ ಸಜೀವ ದಹನ!! ಘಟನೆಯ ಬಗ್ಗೆ ಮೌನ ಮುರಿದು ಬೇಸರ ವ್ಯಕ್ತಪಡಿಸಿದ ಪ್ರಧಾನಿ ಮೋದಿ

Share the Article

ಮಮತಾ ಬ್ಯಾನರ್ಜಿ ಸರ್ಕಾರದ ಪಶ್ಚಿಮ ಬಂಗಾಳದಲ್ಲಿ ಎಂಟು ಮಂದಿ ಸಜೀವ ದಹನ ಹೊಂದಿದ ಘಟನೆ ಬೆಳಕಿಗೆ ಬಂದ ಕೂಡಲೇ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.ಚುನಾವಣೋತ್ತರ ಪಶ್ಚಿಮ ಬಂಗಾಳದಲ್ಲಿ ಭಾರೀ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದ ಬಳಿಕ ಮೌನವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ನಡೆದ ಘಟನೆಯ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ.

ಮಮತಾ ಬ್ಯಾನರ್ಜಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕೂಡಲೇ ವಿರೋಧ ಪಕ್ಷಗಳ ಸ್ಥಳೀಯ ನಾಯಕರು ಹಾಗೂ ಮತದಾರರ ಮೇಲೆ ಹಿಂಸಾಚಾರ ನಡೆದು,ಕೆಲ ಗ್ರಾಮಸ್ಥರು ಬಂಗಾಳವನ್ನೇ ತೊರೆದಿದ್ದರು.

ಕೇವಲ ಹಿಂಸಾಚಾರ ಮಾತ್ರವಲ್ಲದೇ, ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದ ಬಗ್ಗೆ ಸುದ್ದಿಯಾಗಿದ್ದರೂ ಪ್ರಧಾನಿ ಮೋದಿ, ದೀದಿಯ ಸರ್ಕಾರದ ಬಗ್ಗೆ ಮೌನ ವಹಿಸಿದ್ದರು. ಆದರೆ ನಿನ್ನೆ ನಡೆದ ಘಟನೆಯ ಬಗ್ಗೆ ಮಾತನಾಡಿದ ಮೋದಿ, ಈ ಘಟನೆಯು ಅತ್ಯಂತ ಬೇಸರ ಉಂಟುಮಾಡಿದ್ದು, ನೀಚ ಕೃತ್ಯ ಈಸಗಿದವರಿಗೆ ಹಾಗೂ ಸಹಕರಿಸಿದವರಿಗೆ ಸರ್ಕಾರ ಸೂಕ್ತ ಶಿಕ್ಷೆ ನೀಡುತ್ತದೆ ಎಂಬ ಆಶಾಭಾವನೆ ಹೊಂದಿದ್ದು, ಅಪರಾಧೀಗಳಿಗೆ ಶಿಕ್ಷೆ ನೀಡಲು ಬೇಕಾದ ಎಲ್ಲಾ ಸಹಕಾರ ಕೇಂದ್ರ ನೀಡುತ್ತದೆ ಎಂದು ಹೇಳಿದರು.

Leave A Reply