ಪದವೀಧರರೇ RBI ನಿಂದ ನಿಮಗೊಂದು ಗುಡ್ ನ್ಯೂಸ್ | 294 ಗ್ರೇಡ್ ಬಿ ಆಫೀಸರ್ ಹುದ್ದೆಗೆ ಅಧಿಸೂಚನೆ ಪ್ರಕಟ!

ಭಾರತೀಯ ರಿಸರ್ವ್ ಬ್ಯಾಂಕ್ ಗ್ರೇಡ್ ಬಿ ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮಾರ್ಚ್ 28 ರಿಂದ ಏಪ್ರಿಲ್ 18 ರವರೆಗೆ ಅವಕಾಶ ಇರುತ್ತದೆ. ಈ ಹುದ್ದೆಗಳಿಗೆ ಸ್ನಾತಕೋತ್ತರ ಪದವೀಧರು ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ.

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗ್ರೇಡ್ ಬಿ ಆಫೀಸರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿ, ಆಯ್ಕೆ ಪ್ರಕ್ರಿಯೆ ನಡೆಸುತ್ತದೆ. ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

ಗ್ರೇಡ್ ಬಿ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದಾದ್ಯಂತ ಯಾವುದೇ ಪ್ರದೇಶದ ಕಚೇರಿಯಲ್ಲಿ ಹುದ್ದೆ ಮಾಡಬೇಕು.

ಹುದ್ದೆಗಳ ವಿವರ : ಆಫೀಸರ್ ಗ್ರೇಡ್ ಬಿ ಆಫೀಸರ್ (DR)-General : 238
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-DEPR 31
ಆಫೀಸರ್ ಗ್ರೇಡ್ ಬಿ ಆಫೀಸರ್ (DR)-DSIM : 25

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 28-03-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 18-04-2022 ರ (ಸಂಜೆ 6 ಗಂಟೆವರೆಗೆ)
ಆಫೀಸರ್ ಗ್ರೇಡ್ ಬಿ ಆಫೀಸರ್ ಹುದ್ದೆಗೆ ಪೇಪರ್-1 ಪರೀಕ್ಷೆ ದಿನಾಂಕ : 28-05-2022
ಆಫೀಸರ್ ಗ್ರೇಡ್ ಬಿ ಆಫೀಸರ್ ಹುದ್ದೆಗೆ ಪೇಪರ್-2 ಪರೀಕ್ಷೆ ದಿನಾಂಕ : 25-06-2022
ಆಫೀಸರ್ ಗ್ರೇಡ್ ಬಿ ಆಫೀಸರ್ DEPR, DSIM ಪೇಪರ್-1 ಪರೀಕ್ಷೆ ದಿನಾಂಕ : 02-07-2022
ಆಫೀಸರ್ ಗ್ರೇಡ್ ಬಿ ಆಫೀಸರ್ DEPR, DSIM ಪೇಪರ್-2 ಪರೀಕ್ಷೆ ದಿನಾಂಕ :06-08-2022

ವೇತನ : ಮಾಸಿಕ ವೇತನ ರೂ.83254 ನೀಡಲಾಗುತ್ತದೆ.

ವಿದ್ಯಾರ್ಹತೆ : ಪದವಿ/ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರಿಸರ್ವ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ www.rbi.org.in ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

Leave A Reply

Your email address will not be published.