ಬಜಪೆ: ಕಂದಾವರಪದವು ಕೋಡ್ದಬ್ಬು ದೈವಸ್ಥಾನದಲ್ಲಿ ಮುಸ್ಲಿಂ ವ್ಯಕ್ತಿಯಿಂದ ದುಷ್ಕೃತ್ಯ!! ಭಕ್ತರ ಪ್ರಾರ್ಥನೆ-ಪೊಲೀಸರಿಗೆ ದೂರು

Share the Article

ಮಂಗಳೂರು: ನಗರದ ಹೊರವಲಯದ ಕೈಕಂಬ ಕಂದಾವರ ಗ್ರಾಂ.ಪಂ ವ್ಯಾಪ್ತಿಗೆ ಒಳಪಟ್ಟ, ಕಂದಾವರ ಪದವು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ವಿಕೃತಿ ಮೆರೆದ ಆರೋಪಿಯೊಬ್ಬನನ್ನು ಘಟನೆ ನಡೆದ ಕೆಲ ಗಂಟೆಗಳಲ್ಲಿ ಬಜ್ಪೆ ಪೊಲೀಸರು ಬಂಧಿಸಿದ್ದು, ಭಕ್ತರ ಪ್ರಾರ್ಥನೆಗೆ ಒಲಿದ ದೈವ ಮತ್ತೊಮ್ಮೆ ತನ್ನ ಕಾರ್ಣಿಕ ಮೆರೆದ ಘಟನೆ ಮಾರ್ಚ್ 20 ರಂದು ನಡೆದಿದೆ.

ಘಟನೆ ವಿವರ: ಇಲ್ಲಿನ ಕೋಡ್ದಬ್ಬು ದೈವಸ್ಥಾನದ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿದ ಮುಸ್ಲಿಂ ವ್ಯಕ್ತಿಯೊಬ್ಬ ಗುಡಿಯಲ್ಲಿ ಉರಿಯುತ್ತಿದ್ದ ದೀಪವನ್ನು ಆರಿಸಿ, ಕವಚಿ ಹಾಕಿದಲ್ಲದೆ ರಕ್ತ ಸುರಿಸಿದ್ದು ಬಳಿಕ ಆಯದಕಲ್ಲಿಗೂ ರಕ್ತ ಸುರಿಸುತ್ತಾ ಅಂಗಣದ ಸುತ್ತಲೂ ರಕ್ತ ಸುರಿಸಿ ವಿಕೃತಿ ಮೆರೆದಿದ್ದಾನೆ.ಮುಂಜಾನೆ ದೈವದ ಚಾಕಿರಿ ಮಾಡುವವರು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ವಿಷಯ ಸುದ್ದಿಯಾಗುತ್ತಿದ್ದಂತೆ ಭಕ್ತರು ಸೇರಿದ್ದು, ಮಧ್ಯಾಹ್ನ ಬಬ್ಬುಸ್ವಾಮಿಯ ದರ್ಶನ ನಡೆಸಿ ದರ್ಶನದ ಸಮಯದೊಳಗೆ ದುಷ್ಕರ್ಮಿ ಪತ್ತೆಯಾಗಬೇಕೆಂದು ಪ್ರಾರ್ಥಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಾದ ಕೆಲ ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಮಾನಸಿಕ ಅಸ್ವಸ್ಥ ಸಾಹುಲ್ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ದೈವಸ್ಥಾನವನ್ನು ಪುನರ್ ನಿರ್ಮಾಣ ನಡೆಸಿ, ಕಲಶಾಭಿಷೇಕ ನಡೆದಿದ್ದು ದಿನದಿಂದ ದಿನಕ್ಕೆ ದೈವಗಳ ಕಾರ್ಣಿಕ ಹೆಚ್ಚುತ್ತಿರುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ.

Leave A Reply