ಕೋವಿಡ್ ನಾಲ್ಕನೇ ಅಲೆ ಪ್ರಾರಂಭ ! ಇಲ್ಲಿದೆ ಮಹತ್ವದ ಮಾಹಿತಿ

Share the Article

ಹಿಂದೆ ತ್ರೇತಾಯುಗ , ದ್ವಾಪರಯುಗ ಎಂದು ಇತ್ತು. ಈಗ ಕೊರೊನಾ ಯುಗ ಡೆಲ್ಟಾ ಯುಗ ಎಂದಾಗಿದೆ. ಕೊರೊನಾ ೩ ಅಲೆಯೆಬ್ಬಿಸಿ, ಈಗ ನಾಲ್ಕನೇ ಅಲೆಗೆ ಸಜ್ಜಾಗುತ್ತಿದೆ.
ಈ ಮೊದಲು ಮೂರನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ನಾಲ್ಕನೇ ಅಲೆಯ ಮುನ್ಸೂಚನೆಯನ್ನೂ ನೀಡಿದೆ. ಬಹುತೇಕ ಆಗಸ್ಟ್ ನಲ್ಲಿ ಕೋವಿಡ್ ನ ನಾಲ್ಕನೇ ಅಲೆ ಬರುವ ಮುನ್ಸೂಚನೆ ನೀಡಿದೆ 

ವಿಧಾನ ಪರಿಷತ್ ನ ಶೂನ್ಯ ವೇಳೆಯಲ್ಲಿ ಕೋವಿಡ್‌ ನಾಲ್ಕನೇ ಅಲೆ ಆಗಸ್ಟ್ ವೇಳೆಗೆ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಆದರೆ ಜನತೆಗೆ ಧೈರ್ಯ ತುಂಬಿದ್ದಾರೆ.

ನಮ್ಮಲ್ಲಿ ಲಸಿಕಾ ಅಭಿಯಾನ ಉತ್ತಮವಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಿಸಲು ಮಕ್ಕಳ ಪೋಷಕರ ಮನಒಲಿಸಲಾಗುವುದು ಲಸಿಕಾಕರಣ ಕೋವಿಡ್ ಅನ್ನು ತಡೆಯುತ್ತೆ. ಆದರೂ ಕೋವಿಡ್ ತಡೆಯುವ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಈ ಮೊದಲ ಮೂರು ಅಲೆಗಳ ಅನುಭವದಿಂದ ಚಿಕಿತ್ಸೆ ನೀಡುವುದನ್ನು ವೈದ್ಯರು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ನಾಲ್ಕನೇ ಅಲೆ ಬಂದರೂ ಸಾರ್ವಜನಿಕರು ಆತಂಕ ಪಡುವ, ಹೆದರುವ ಅಗತ್ಯ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

Leave A Reply