ಫುಟ್ಬಾಲ್ ಪಂದ್ಯದ ವೇಳೆ ಗ್ಯಾಲರಿ ಕುಸಿದು, 225 ಮಂದಿಗೆ ಗಾಯ !

Share the Article

ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಗ್ಯಾಲರಿಯೊಂದು ಕುಸಿದಿದ್ದು, 225 ಮಂದಿ ಗಾಯಗೊಂಡಿದ್ದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಶನಿವಾರ ರಾತ್ರಿ ಸೆವೆನ್ಸ್ ಫುಟ್‌ಬಾಲ್ ಪಂದ್ಯ ಆರಂಭಕ್ಕೂ ಮುನ್ನ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ವಂಡೂರ್ ಸಮೀಪದ ಪೂಂಗೋಡಿನ ಶಾಲಾ ಮೈದಾನದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ.

ಸ್ಥಳೀಯ ಫುಟ್‌ಬಾಲ್ ಕ್ಲಬ್ ನೇತೃತ್ವದ ಸಹಾಯಾರ್ಥ ಈ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯ ವೀಕ್ಷಣೆಗೆ ಸುಮಾರು 3,500 ಮಂದಿ ಆಗಮಿಸಿದ್ದರು.

ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

Leave A Reply