ಪಡಿತರ ಚೀಟಿದಾರರೇ ಗಮನಿಸಿ : ಎಪ್ರಿಲ್ ನಿಂದ ಗೋಧಿ ವಿತರಣೆ ಇಲ್ಲ | ಗೋಧಿ ಬದಲು ಹೆಚ್ಚುವರಿ ಅಕ್ಕಿ ವಿತರಣೆ

ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತಿದ್ದ ಗೋಧಿ ಇನ್ನು ಮುಂದೆ ಪಡಿತರ ಚೀಟಿದಾರರಿಗೆ ಸದ್ಯಕ್ಕೆ ಸಿಗುವುದಿಲ್ಲ. ಮಾರ್ಚ್ ತಿಂಗಳಲ್ಲೇ ಈ ಗೋಧಿ ವಿತರಣೆ ಕೊನೆಯಾಗಲಿದೆ. ಇದರ ಬದಲು ಏಪ್ರಿಲ್‌ನಿಂದ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತಣೆಯಾಗಲಿದೆ.

 

ಇಲ್ಲಿಯವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಕೋಟಾದಲ್ಲಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ಹಾಗೂ ಒಂದು ಪಡಿತರ ಕಾರ್ಡ್‌ಗೆ 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಏಪ್ರಿಲ್ ತಿಂಗಳಿಂದ ಕೊರೊನಾ ಕಾರಣದಿಂದಾಗಿ ಕೇಂದ್ರ ಸರಕಾರ ವಿತರಣೆ ಮಾಡುತ್ತಿದ್ದ ತಲಾ 5 ಕೆ.ಜಿ. ಅಕ್ಕಿ ವಿತರಣೆಯ ಸಮಯ ಮುಗಿಯಲಿದೆ.

ಏಪ್ರಿಲ್‌ನಿಂದ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಸೇರಿ 6 ಕೆ.ಜಿ. ಅಕ್ಕಿ ಇನ್ನು ಮುಂದೆ ದೊರೆಯಲಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಅಕ್ಕಿಯಷ್ಟೇ ಪಡಿತರದಾರರಿಗೆ ಸಿಗಲಿದೆ.

ರಾಜ್ಯ ಸರಕಾರದಿಂದ ಆದೇಶ ಬಂದಿದ್ದರೂ, ನ್ಯಾಯಬೆಲೆ ಅಂಗಡಿಗಳಿಗೆ ಇನ್ನೂ ಈ ವಿಷಯ ತಲುಪಿಲ್ಲ. ಆದರೆ ಮೌಖಿಕವಾಗಿ ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿಂದ ಗೋಧಿ ಸಿಗಲ್ಲ. ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ಹೆಚ್ಚಿಗೆ ಸಿಗಲಿದೆ.

ಆದರೆ ಸರಕಾರದ ಈ ನಿರ್ಧಾರಕ್ಕೆ ಆಗಲೇ ಪಡಿತರದಾರದಾರರಿಂದ ಆಕ್ಷೇಪ ವ್ಯಕ್ತವಾಗಿದೆ.

ಗೋಧಿ ವಿತರಣೆಗೆ ಬ್ರೇಕ್ ಹಾಕಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮೊದಲು ಪಡಿತರ ಅಂಗಡಿಗಳಲ್ಲಿ ಎಣ್ಣೆ, ಸೋಪು, ಸಕ್ಕರೆ ಹೀಗೆ ಇನ್ನಷ್ಟು ಪದಾರ್ಥಗಳನ್ನು ಮಾರಲಾಗುತ್ತಿತ್ತು. ಸಕ್ಕರೆ ಕೊಡುವುದನ್ನು ಕೂಡಾ ನಿಲ್ಲಿಸಿ ಎಷ್ಟೋ ವರ್ಷಗಳಾಗಿವೆ. ಈಗ ಗೋಧಿಯನ್ನು ಈಗ ನಿಲ್ಲಿಸಲಾಗುತ್ತಿದೆ.

Leave A Reply

Your email address will not be published.