ಮಂಗಳೂರು : ಕಾಲೇಜು ಆಡಳಿತ ಮಂಡಳಿಯ ಬಗ್ಗೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ | ಡೆತ್ ನೋಟಲ್ಲಿ ಏನಿದೆ ? ಇಲ್ಲಿದೆ ಫುಲ್ ಡಿಟೇಲ್ಸ್
ಮಂಗಳೂರು : ಮಂಗಳೂರಿನ ಖಾಸಾಗಿ ಕಾಲೇಜೊಂದರ ವಿದ್ಯಾರ್ಥಿ, ಬೆಂಗಳೂರು ಕುಮಾರಸ್ವಾಮಿ ಬಡಾವಣೆಯ ನಿವಾಸಿ 20 ವರ್ಷದ ಭರತ್ ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಹೊಟೇಲ್ ಮ್ಯಾನೇಜೆಂಟ್ ಕಾಲೇಜಿನಲ್ಲಿ ಓದುತ್ತಿದ್ದ ಭರತ್ ತಾನು ವಾಸವಿದ್ದ ಉರ್ವ ಸ್ಟೋರ್ ಸಮೀಪದ ಪಿ.ಜಿ.ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಮುನ್ನ ಭರತ್ ತಾಯಿಗೆ ಕರೆ ಮಾಡಿ, ಆ ಸಮಯದಲ್ಲಿ ಕರೆ ಸ್ವೀಕರಿಸಲು ತಾಯಿಗೆ ಸಾಧ್ಯವಾಗಿರಲಿಲ್ಲ. ನನ್ನ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ ಕಾರಣ,ಈ ಕಾಲೇಜಿಗೆ ಬಂದು ಒಂದುವರೆ ವರ್ಷವನ್ನು ಹಾಳು ಮಾಡಿದೆ ಎಂದು ಬರೆದಿದ್ದಾನೆ.
ಕಾಲೇಜಿನಲ್ಲಿ ಸರಿಯಾಗಿ ತರಗತಿಗಳು ನಡೆಯುವುದಿಲ್ಲ, ಶಿಕ್ಷಕರಿಲ್ಲ,ಕಾಲೇಜು ಆಡಳಿತ ಮಂಡಳಿ ನನಗೆ ಮೋಸ ಮಾಡಿದೆ ಹಾಗಾಗಿ ನನ್ನ ಸಾವಿಗೆ ಕಾಲೇಜ್ ಆಡಳಿತ ಮಂಡಳಿ ಕಾರಣ ಎಂದು ಭರತ್ ಸಾಯುವ ಮುನ್ನ ಡೆತ್ ನೋಟನ್ನು ಬರೆದಿಟ್ಟಿದ್ದಾನೆ.
ಜೊತೆಗೆ ‘ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿ ಇಲ್ಲ ಎಂದು ಸಹಿ ಮಾಡದೆ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡಿದ್ದಾರೆ, ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ,
ಆದುದರಿಂದ ಈ ಲೋಕವನ್ನು ತ್ಯಜಿಸುತ್ತಿದ್ದೇನೆ’ ಎಂದು ಭರತ್ ತನ್ನ ಪೋಷಕರಿಗೆ ಕೊನೆಯದಾಗಿ ಮೆಸೇಜ್ ಮಾಡಿದ್ದಾನೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿರುವ ಮೃತ ಭರತ್‌ನ ತಂದೆ, ತಾಯಿ ಆಕ್ರಂದನ ಮುಗಿಲು ಮುಟ್ಟಿದ್ದು ಮಗನ ಸಾವಿಗೆ ಕಾರಣರಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಮನವಿ ಮಾಡಿದ್ದಾರೆ.
ಉರ್ವ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.