ತುಳುನಾಡಿನ ನಂಬಿಕೆಯ ಕೊರಗಜ್ಜನ ಪವಾಡ ಮತ್ತೊಮ್ಮೆ ಸಾಬೀತು | ಮಲಗಿದ್ದಲ್ಲೇ ಇದ್ದ ಮಗು ಎದ್ದು ಓಡಾಡೋಕೆ ಶುರು !
ಸುಳ್ಯ: ತುಳುನಾಡಿನಲ್ಲಿ ಕೊರಗಜ್ಜ ಅಂದರೆ ಪವಾಡ. ತುಳುನಾಡ ಜನತೆ ಮಾತ್ರವಲ್ಲ ಎಲ್ಲರೂ ಈ ದೈವದ ಪವಾಡ ನಂಬುತ್ತಾರೆ. ಈ ಪವಾಡಗಳು ನಿಜ ಎಂದು ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಲೇ ಇದೆ.
ಕೊರಗಜ್ಜನ ಮೂಲ ಸ್ಥಾನ ಮಂಗಳೂರಿನ ಕುತ್ತಾರು. ಆದರೂ ಕರಾವಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕೊರಗಜ್ಜನ ದೈವಸ್ಥಾನಗಳಿವೆ. ಅದರಲ್ಲಿ ತನ್ನ ಕಾರ್ಣಿಕ ಹಾಗೂ ಪವಾಡದ ಮೂಲಕ ಭಕ್ತರನ್ನು ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದ ದೊಡ್ಡಡ್ಕದಲ್ಲಿರುವ ಕೊರಗಜ್ಜನ ಕ್ಷೇತ್ರ.
ಇನ್ನು ಕಳೆದ ವರ್ಷ ಈ ಕ್ಷೇತ್ರದಲ್ಲಿ ಪವಾಡವೊಂದು ನಡೆದಿತ್ತು. ಕಾಲಾವಧಿ ಜಾತ್ರೋತ್ಸವದ ವೇಳೆ 12 ದೈವದ ಕೋಲಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ ದೈವ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಹಲವು ಮಂದಿಗೆ 13 ದೈವಗಳು ಗೋಚರಿಸಿ ಅಚ್ಚರಿ ಮೂಡಿಸಿತ್ತು.
ಈ ಕ್ಷೇತ್ರಕ್ಕೆ ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ತಮ್ಮ ಕಣ್ಣ ಮುಂದೆಯೇ ನಡೆದ ಪವಾಡವೊಂದರ ಬಗ್ಗೆ ಇಲ್ಲಿನ ಆಡಳಿತ ಮೊಕ್ತೇಸರರಾದ ಚಂದ್ರಶೇಖರ್ ಅವರು ಕೊರಗಜ್ಜನ ಪವಾಡವನ್ನು ಹೇಳಿ ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ. ತುಂಬಾ ಸಮಯದಿಂದ ಮಲಗಿದ್ದಲ್ಲೇ ಇದ್ದ ಮಗುವೊಂದರ ಪೋಷಕರು ಇಲ್ಲಿಗೆ ಬಂದು ಪ್ರಸಾದ ಸ್ವೀಕರಿಸಿದ ನಾಲ್ಕೇ ದಿನದಲ್ಲಿ ಆ ಮಗು ಓಡಾಡುವುದಕ್ಕೆ ಆರಂಭಿಸಿದ್ದು. ಇಂತಹ ಅನೇಕ ಪವಾಡಗಳು ಇಲ್ಲಿ ನಡೆದಿವೆ.