ಹೈ ಕೋರ್ಟ್ ತೀರ್ಪಿನಲ್ಲಿ ಅಸಮಾಧಾನದ ಹಿನ್ನೆಲೆ!!ಹಿಜಾಬ್ ಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧಳಾದ ವಿದ್ಯಾರ್ಥಿನಿ
ಹಿಜಾಬ್ ಬಗೆಗಿನ ಹೈಕೋರ್ಟ್ ತೀರ್ಪು ಬಂದಿರುವುದು ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೋರಾಟ ನಡೆಸುತ್ತೇವೆ ಎಂದು ವಿದ್ಯಾರ್ಥಿನಿ, ಧಾರ್ಮಿಕ ಹಕ್ಕಿನ ಹೋರಾಟಗಾರ್ತಿ ಆಲಿಯಾ ಅಸ್ಸಾದಿ ಹೇಳಿದರು.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ತೆರೆದು ತರಗತಿ ಪ್ರವೇಶಿಸುವುದಿಲ್ಲ, ನಾವು ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಪವಿತ್ರ ಕುರಾನ್ ನಲ್ಲೇ ಹಿಜಾಬ್ ಧರಿಸುವ ಉಲ್ಲೇಖ ಇದ್ದು, ನಮ್ಮ ಧರ್ಮದ ಗ್ರಂಥವನ್ನೇ ಪಾಲಿಸುತ್ತೇವೆ ಹೊರತು ಸರ್ಕಾರದ ಆದೇಶವನ್ನು ಪಾಲಿಸುವುದಿಲ್ಲ ಎಂದು ಹೇಳಿದರು.
ನಾವು ಹಕ್ಕಿಗಾಗಿ ಹೋರಾಟ ನಡೆಸಿದ್ದು, ಇದರಲ್ಲಿ ಸರ್ಕಾರ ಮಧ್ಯಂತರ ಆದೇಶ ತರುವ ಮೂಲಕ ಹೈ ಕೋರ್ಟ್ ಮೇಲೆ ಒತ್ತಡ ಹೇರಿದೆ. ರಾಜ್ಯ ಸರ್ಕಾರವು ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ ಎಂದು ಹೇಳಿದರು.