ಬೆಳ್ತಂಗಡಿ:ತುಳುನಾಡಿನ ಅತೀ ಪ್ರಾಚೀನ ‘ಗುರು ಆಯಿನ’ ಕೆರೆಗೆ ಬಿತ್ತು ವಿಷ!! ರಾತ್ರೋ ರಾತ್ರಿ ವಿಷ ಬೆರೆಸಿ ಮೀನು ಹಿಡಿಯಲು ಮುಂದಾದ ದುಷ್ಕರ್ಮಿಗಳು
ಮಂಗಳೂರು : ಬೆಳ್ತಂಗಡಿ ತಾಲೂಕಿನ ಅತೀ ದೊಡ್ಡ ಕೆರೆ ಎಂಬ ಖ್ಯಾತಿ ಗಳಿಸಿದ ಗುರುವಾಯನಕೆರೆ ಪೇಟೆಗೆ ತಾಗಿಕೊಂಡೇ ಇರುವ ಗುರುವಾಯನಕೆರೆಗೆ ದುಷ್ಕರ್ಮಿಗಳು ವಿಷ ಹಾಕಿದ ಆತಂಕಕಾರಿ ಘಟನೆಯೊಂದು ಮಾ.14 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕೆರೆಯಲ್ಲಿದ್ದ ಮೀನುಗಳು ಸಾವು ವಿಷ ಪ್ರಾಶಾಣದಿಂದ ಸಂಭವಿಸಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 7 ಎಕ್ರೆಯಷ್ಟು ವಿಶಾಲ ಪ್ರದೇಶದಲ್ಲಿ ಇರುವ ಈ ಕೆರೆಯಲ್ಲಿ ಈ ಮೊದಲೇ ಗ್ರಾ.ಪಂಚಾಯತ್ ಮೀನು ಹಿಡಿಯುವುದನ್ನು ನಿಷೇಧಿಸಿತ್ತು. ಆ ಕಾರಣಕ್ಕಾಗಿಯೇ ಕೆರೆಗೆ ವಿಷ ಹಾಕಿರಬಹುದೇ ಎಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
ನಿನ್ನೆ ತಡರಾತ್ರಿ ಈ ಕೆರೆಗೆ ಯಾರೋ ದುಷ್ಕರ್ಮಿಗಳು ಈ ಕೆರೆಗೆ ವಿಷ ಹಾಕಿರುವ ಸಂಭವವಿದೆ. ಮೃತ ಮೀನಿನ ದೇಹ ನೀರಿನ ಮೇಲೆ ತೇಲಾಡುತ್ತಾ ಇದೆ. ಈ ಘಟನೆ ಮತ್ಸ್ಯ ಪ್ರಿಯರನ್ನು ದಿಗ್ಭ್ರಮೆಗೊಳಿಸಿದೆ.