ಮಾಜಿ ಸಿಎಂ ಉಮಾಭಾರತಿಯಿಂದ ಮದ್ಯದಂಗಡಿಗೆ ಕಲ್ಲೆಸೆತ : ‘ಜೈಶ್ರೀರಾಮ್’ ಘೋಷಣೆ ಕೂಗಿದ ಕಾರ್ಯಕರ್ತರು!

ಮಾಜಿ ಸಿಎಂ ಉಮಾಭಾರತಿ ಅವರು ಮಧ್ಯಪ್ರದೇಶದ ಮದ್ಯದಂಗಡಿಗೆ ತಮ್ಮ‌ ಬೆಂಬಲಿಗರೊಂದಿಗೆ ನುಗ್ಗಿ ಕಲ್ಲೆಸೆದ ಆತಂಕಕಾರಿ ಘಟನೆಯೊಂದು ಭೋಪಾಲ್ ನಲ್ಲಿ ನಡೆದಿದೆ.

 

ಉಮಾಭಾರತಿ ಕಲ್ಲೆಸೆದಾಗ ಬೆಂಬಲಿಗರು ‘ ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮದ್ಯದಂಗಡಿಗೆ ಕಲ್ಲೆಸೆಯುವ ವೀಡಿಯೋವನ್ನು ಸ್ವತಃ ಉಮಾಭಾರತಿಯೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಭೋಪಾಲ್ ನ BHEL ಪ್ರದೇಶದ ಆಜಾದ್ ನಗರದಲ್ಲಿ ಉಮಾಭಾರತಿ ಮದ್ಯದಂಗಡಿಗೆ ಕಲ್ಲೆಸೆದಿದ್ದಾರೆ. ಈ ಪ್ರದೇಶದಲ್ಲಿರುವ ಜನರು ಹಣವನ್ನು ಇಲ್ಲಿಗೆ ಬಂದು ಹಾಕುತ್ತಿದ್ದಾರೆ. ಇಲ್ಲೇ ಹತ್ತಿರದಲ್ಲಿ ದೇವಾಲಯಗಳಿವೆ. ಸಣ್ಣ ಮಕ್ಕಳ ಶಾಲೆಗಳಿವೆ ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.