ಕಡಬ:ಅಪಘಾತದ ತೀವ್ರತೆಗೆ ಸ್ಕ್ರಾಪ್ ಆಗಿದ್ದರೂ ಹಿಂದಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಅದೊಂದು ಮೊಬೈಲ್ ಫೋನ್!! ಕುತೂಹಲ ಕೆರಳಿಸಿದ ಮೊಬೈಲ್ ಯಾವುದು ಗೊತ್ತಾ!?

ಅಪಘಾತದ ಭೀಕರತೆಗೆ ಛಿದ್ರವಾದರೂ ಇನ್ನೂ ತನ್ನ ಕಾರ್ಯ ಚಟುವಟಿಕೆಯಲ್ಲಿ ಹಿಂದಿನಂತೆಯೇ ತೊಡಗುತ್ತಿರುವ ಮೊಬೈಲ್ ಫೋನ್ ಒಂದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಒಡೆದು ಚೂರು ಚೂರಾದರೂ ಕಾರ್ಯನಿರ್ವಹಿಸುವ ಈ ಮೊಬೈಲ್ ಫೋನ್ ನ ಕಥೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದೆ.

 

ಹೌದು, ಇಂತಹದೊಂದು ಘಟನೆ ನಡೆದಿದ್ದು ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ. ಕಳೆದ ಕೆಲ ತಿಂಗಳುಗಳ ಹಿಂದೆ ಇಲ್ಲಿನ ಯುವಕರೊಬ್ಬರು ತನ್ನ ಗೆಳೆಯನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತವಾಗಿ ಅಲ್ಪಸ್ವಲ್ಪ ಗಾಯಗಳಾಗಿದ್ದವು. ಅಪಘಾತದ ತೀವ್ರತೆಗೆ ಮೊಬೈಲ್ ಫೋನ್ ರಸ್ತೆಗೆ ಎಸೆಯಲ್ಪಟ್ಟು ಚೂರು ಚೂರಾಗಿದ್ದು, ಇನ್ನು ಹೊಸ ಮೊಬೈಲ್ ಫೋನ್ ಗತಿ ಎಂದು ಕೊರಗಿದ ಯುವಕನಿಗೆ ಅಲ್ಲೊಂದು ಅಚ್ಚರಿಯೇ ಕಾದಿತ್ತು.

ಒಂದೆಡೆ ಬೈಕ್ ನ ರಿಪೇರಿ ಇನ್ನೊಂದೆಡೆ ಒಡೆದ ಮೊಬೈಲ್ ಹೀಗೆ ಮನೆ ಕಡೆ ಹೆಜ್ಜೆ ಹಾಕಿದ ಆತನಿಗೆ ಮೊಬೈಲ್ ಅಚ್ಚರಿ ಮೂಡಿಸಿದ್ದು ಪುಡಿ ಪುಡಿಯಾಗಿ ಕಸದ ತೊಟ್ಟಿಗೆ ಬೀಳುವ ಕಾಲ ಸನ್ನಿಹಿತವಾದಾಗ ತಾನು ಇನ್ನೂ ಜೀವಂತವಾಗಿದ್ದೇನೆ ಎಂದು ತೋರ್ಪಡಿಸಿದ್ದು ಹಿಂದಿಗಿಂತಲೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ.

ಸದ್ಯ ಈ ವಿಚಾರ ಆಲಂಕಾರು ಪರಿಸರದಲ್ಲಿ ಕುತೂಹಲ ಕೆರಳಿಸಿದ್ದು, ಯುವಕನ ಮೊಬೈಲ್ ಪುಡಿಯಾಗಿದ್ದರೂ ಜೀವಂತವಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿ ಅಚ್ಚರಿ ಮೂಡಿಸಿದೆ.

Leave A Reply

Your email address will not be published.