ಮದುವೆಯಾದ ನಾಲ್ಕನೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಧು!

ತನಗೆ ಇಷ್ಟವಿಲ್ಲದ ಮದುವೆಗೆ ಬಲವಂತವಾಗಿ ಒಪ್ಪಿಸಿ‌ ಮದುವೆ ಮಾಡಿಸಿದ ಪರಿಣಾಮ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

 

ಚೆನ್ನೈನ ಕೊಟ್ಟೂರು ನಿವಾಸಿ ಸಂಧ್ಯಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಬಿಕಾಂ ವಿದ್ಯಾರ್ಥಿನಿಯಾಗಿದ್ದ ಸಂಧ್ಯಾ ಮಾರ್ಚ್ 4 ರಂದು ಸೇಲಂನಲ್ಲಿ ರಾಜಾ ಎಂಬುವವನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯಾದ ನಾಲ್ಕನೇ ದಿನಕ್ಕೆ ಸಂಧ್ಯಾ ತನ್ನ ತವರು ಮನೆಯಾಗಿರುವ ಕೊರಟ್ಟೂರಿಗೆ ಗಂಡನ ಜೊತೆಗೆ ಬಂದಿದ್ದಳು. ಆದರೆ ಮಾ.7 ರಂದು ಸಂಧ್ಯಾ‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು.

ತಕ್ಷಣವೇ ಸಂಧ್ಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದು, ಪೊಲೀಸರ ತನಿಖೆಯಲ್ಲಿ ಬಲವಂತದ ಮದುವೆಯಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ

Leave A Reply

Your email address will not be published.