ಮಹಿಳಾ ದಿನಾಚರಣೆಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ ‘ಫ್ಲಿಪ್‌ಕಾರ್ಟ್’|ಇದರಿಂದ ರೊಚ್ಚಿಗೆದ್ದ ಮಹಿಳೆಯರ ತಂಡ ಕ್ಷಮೆಯಾಚಿಸುವಂತೆ ಮಾಡಿದೆ |ಅಷ್ಟಕ್ಕೂ ಫ್ಲಿಪ್‌ಕಾರ್ಟ್ ನಲ್ಲಿದ್ದ MSG ಏನು ಗೊತ್ತೇ !?
ಮಂಗಳವಾರ ನಡೆದ ಮಹಿಳಾ ದಿನಾಚರಣೆಗೆ ಹೆಣ್ಣು ದೇಶದ ಶಕ್ತಿ, ಕುಟುಂಬದ ಅಂಗೈ ಎಂದೆಲ್ಲ ಶುಭಾಶಯ ತಿಳಿಸಿದ್ರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮಾತ್ರ ಮಹಿಳೆಯರಿಗೆ ಅವಮಾನ ಮಾಡಿದೆ.ಇದಕ್ಕಾಗಿ ಇಡೀ ಮಹಿಳಾ ಸಂಘಟನೆ ಸಿಡಿದೆದ್ದಿದ್ದು ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕಳುಹಿಸಿದ ಸಂದೇಶಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದೆ.
ಮಹಿಳೆಯರು ಕೇವಲ ಅಡುಗೆ ಮನೆಗೆ ಮೀಸಲಾಗಿ ಉಳಿದಿಲ್ಲ.ಯಾವ ಕೆಲಸಕ್ಕೂ ಸೈ.ಹೀಗಿರುವಾಗ ಬೃಹತ್ ಆನ್‌ಲೈನ್ ವಾಣಿಜ್ಯ ಮಾರುಕಟ್ಟೆಯಾಗಿರುವ ಫ್ಲಿಪ್‌ಕಾರ್ಟ್ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅಡುಗೆ ಉಪಕರಣಗಳ ಮೇಲೆ ಆಫರ್ ಪ್ರಮೋಟ್ ಸಂದೇಶ ಕಳುಹಿಸಿದೆ. ಮಹಿಳೆಯರನ್ನು ಅಡಿಗೆ ಮನೆಗೆ ಸೀಮಿತ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.
ಫ್ಲಿಪ್‌ಕಾರ್ಟ್ ಮಾರ್ಚ್ 7 ರಂದು ಅಡುಗೆ ಸಲಕರಣೆಗಳನ್ನು ಉತ್ತೇಜಿಸುವ ಮಹಿಳಾ ದಿನದ ಸಂದೇಶವನ್ನು ಕಳುಹಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾದ ನಂತರ ದೇಶದ ಬೃಹತ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಫ್ಲಿಪ್‌ಕಾರ್ಟ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದೆ, ‘ನಾವು ಗೊಂದಲಕ್ಕೀಡಾಗಿದ್ದೇವೆ ಮತ್ತು ನಮ್ಮನ್ನು ಕ್ಷಮಿಸಿ’ ನಾವು ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಫ್ಲಿಪ್‌ಕಾರ್ಟ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಿದೆ.
ಆತ್ಮೀಯ ಗ್ರಾಹಕರೇ, ಈ ಮಹಿಳಾ ದಿನಾಚರಣೆಯನ್ನು ನಾವು ಆಚರಿಸೋಣ. ರೂ. 299 ರಿಂದ ಅಡಿಗೆ ಉಪಕರಣಗಳನ್ನು ಪಡೆಯಿರಿ ಎಂದು ಮಾರ್ಚ್ 7 ರಂದು ಫ್ಲಿಪ್‌ಕಾರ್ಟ್ ಸಂದೇಶ ಕಳುಹಿಸಿತ್ತು. ಮಹಿಳೆ ಅಡುಗೆ ಮನೆಗೆ ಮೀಸಲಾಗಿದ್ದಾಳೆ ಎಂಬುದನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಫ್ಲಿಪ್‌ಕಾರ್ಟ್ ಈ ಸಂದೇಶ ಕಳುಹಿಸಿದೆ ಎಂದು ನೆಟ್ಟಿಗರು ದೂರಿದ್ದಾರೆ. ಆದರೆ ಕೆಲವು ಬಳಕೆದಾರರು ಇದರಲ್ಲಿ ತಪ್ಪೇನಿದೆ ಎಂಬಂತೆ ‘ನೀವು ಇಲ್ಲಿ ಸಮಸ್ಯೆಯನ್ನು ಗುರುತಿಸಬಹುದೇ?’ ಎಂದು ಫ್ಲಿಪ್‌ಕಾರ್ಟ್‌ನ ಸಂದೇಶಕ್ಕೆ ಕಾಮೆಂಟ್ ಮಾಡಿದ್ದಾರೆ.
ಮಹಿಳಾ ದಿನದಂದು ಅಡುಗೆ ಸಲಕರಣೆಗಳ ಜಾಹೀರಾತು ನೀಡುವುದರಲ್ಲಿ ತಪ್ಪೇನಿಲ್ಲ. ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ ಸಂತೋಷದಿಂದ ಅಡುಗೆ ಮಾಡುತ್ತಾರೆ. ಅದರಿಂದ ನಾವು ಅಧಿಕಾರವಿಲ್ಲದವರು ಅಥವಾ ಗುಲಾಮರು ಎಂದು ಹೇಳಲಾಗದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸರಣಿಯಾಗಿ ಬಂದ ಟೀಕೆಗಳ ನಂತರ ಫ್ಲಿಪ್‌ಕಾರ್ಟ್ , ನಾವು ಗೊಂದಲಕ್ಕೊಳಗಾಗಿದ್ದೇವೆ ಮತ್ತು ಕ್ಷಮಿಸಿ. ನಾವು ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಮತ್ತು ಈ ಹಿಂದೆ ಹಂಚಿಕೊಂಡ ಮಹಿಳಾ ದಿನಾಚರಣೆಯ ಸಂದೇಶಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.