ಬೆಳ್ತಂಗಡಿ : ಬುಲೆಟ್ ಬೈಕ್- ಆಟೋ ಡಿಕ್ಕಿ| ರಸ್ತೆಗೆ ಎಸೆಯಲ್ಪಟ್ಟ ಸವಾರ ಗಂಭೀರ !

Share the Article

ಬೆಳ್ತಂಗಡಿ : ರಿಕ್ಷಾ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಭಸದಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ‌ ಘಟನೆ ಕೊಕ್ಕಡ ಸಮೀಪದ ಪಾರ್ಪಿಕಲ್ಲು ಎಂಬಲ್ಲಿ ಬುಧವಾರ ಮಾ.9 ಕ್ಕೆ ಸಂಜೆ ನಡೆದಿದೆ.

ಗಾಯಗೊಂಡವರನ್ನು ವೇಣೂರಿನ ಕಿರಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕಿರಣ್ ಶೆಟ್ಟಿ ದುಬೈನಲ್ಲಿ ಉದ್ಯೋಗದಲ್ಲಿದ್ದು ಕಳೆದವಾರವಷ್ಟೇ ಊರಿಗೆ ಬಂದಿದ್ದರು. ಕೊಕ್ಕಡದಲ್ಲಿ ತನ್ನ ಸ್ನೇಹಿತನನ್ನು ಭೇಟಿ ಮಾಡುವ ಕಾರಣ ಆಗಮಿಸಿದ್ದರು.

ವೇಣೂರಿಗೆಂದು ಹಿಂತಿರುಗುವಾಗ ಪಾರ್ಪಿಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಿರಣ್ ಶೆಟ್ಟಿಯವರ ಭುಜ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ಕೊಕ್ಕಡ ಆಂಬುಲೆನ್ಸ್ ನಲ್ಲಿ ಉಜಿರೆಗೆ ಕರೆದುಕೊಂಡು ಹೋಗಲಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲಾಗಿದೆ.

Leave A Reply