ಸುಬ್ರಹ್ಮಣ್ಯ: ಪಾತ್ರೆ ತೊಳೆಯುವ ಸಿಂಕ್ ನಲ್ಲಿ ಬುಸುಗುಟ್ಟಿದ ಭಾರೀ ಗಾತ್ರದ ಕಾಳಿಂಗ !!
ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಹರಿಹರ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿ ಸ್ಥಳಿಯರನ್ನು ಭಯಭೀತರನ್ನಾಗಿಸಿದ ಘಟನೆ ನಡೆದಿದೆ.
ಕಲ್ಮಕಾರು ಗ್ರಾಮದ ರಾಧಾಕೃಷ್ಣ ಎಂಬವರ ಮನೆಯಲ್ಲಿ ಈ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅರಣ್ಯ ಪರಿಸರದಲ್ಲಿ ಮನೆ ಇದ್ದ ಕಾರಣ ಕಾಳಿಂಗ ಸರ್ಪ ಆಹಾರ ಹುಡುಕುತ್ತಾ ಮನೆ ವಠಾರ ಸೇರಿದೆ. ಮನೆಯ ಪಾತ್ರೆ ತೊಳೆಯುವ ಸಿಂಕಿನಲ್ಲಿ ಮಲಗಿದ್ದ ಕಾಳಿಂಗ ಸರ್ಪವನ್ನು ನೋಡಿ ಒಮ್ಮೆಗೆ ಎಲ್ಲರೂ ದಿಗ್ಭ್ರಾಂತರಾಗಿದ್ದಂತೂ ನಿಜ.
ಕಾಳಿಂಗನನ್ನು ಸೆರೆ ಹಿಡಿಯಲು ಕೊಡಗು ಜಿಲ್ಲೆಯ ಉರಗ ರಕ್ಷಕ ಸ್ನೇಕ್ ಪ್ರವೀಣ್ ಶೆಟ್ಟಿಯನ್ನು ಸಂಪರ್ಕಿಸಲಾಯಿತು. ಇದೀಗ ಸರ್ಪವನ್ನು ಸುರಕ್ಷಿತವಾಗಿ ಬಿಸಿಲೇ ಘಾಟ್ ಅರಣ್ಯಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ಬಿಟ್ಟು ಬರಲಾಗಿದೆ.