ಮೇಕೆದಾಟು ಯೋಜನೆಗೆ ನಟ ಚೇತನ್ ವಿರೋಧ!

ಬೆಂಗಳೂರು : ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದಂತ ಅವರು, ಅರಣ್ಯ ಪ್ರದೇಶವನ್ನು ನಾಶ ಮಾಡಿ, ಆ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೋದಕ್ಕೆ ನಮ್ಮ ವಿರೋಧವಿದೆ ಎಂದು ನಟ ಚೇತನ್ ಹೇಳಿದ್ದಾರೆ.

 

ಮೇಕೆದಾಟು ಅಣೆಕಟ್ಟನ್ನು ಹೊಸದಾಗಿ ಕಟ್ಟೋದಕ್ಕೆ ನಮ್ಮ ವಿರೋಧವಿದೆ. ಅರಣ್ಯ ನಾಶ ಇದರಿಂದ ಆಗಲಿದೆ. ಜೀವ ಸಂಕುಲಕ್ಕೆ ಹೊಡೆತ ಬೀಳಲಿದೆ. ಆ ವ್ಯಾಪ್ತಿಯ ಜನ ಬೀದಿ ಪಾಲಾಗಲಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.

ಜಲಸಂಪನ್ಮೂಲವನ್ನು ವೈಜ್ಞಾನಿಕವಾಗಿ ಪೋಲು ಮಾಡದಂತೆ ತಡೆಯಲು, ಕೃಷಿ ಕುಡಿಯುವ ನೀರಿಗಾಗಿ ಸರಕಾರಗಳು ವ್ಯವಸ್ಥಿತ ಯೋಜನೆಗಳನ್ನು ರೂಪಿಸಬೇಕು. ಅದರ ಹೊರತಾಗಿ ಡ್ಯಾಂಗಳ ಅವಶ್ಯಕತೆಯಿಲ್ಲ ಎಂದರು

Leave A Reply

Your email address will not be published.