ಉಪ್ಪಿನಂಗಡಿ : ಮಹಿಳೆಯ ಬ್ಯಾಗ್ ನಿಂದ 1.76 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Share the Article

ಉಪ್ಪಿನಂಗಡಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಿಂದ 1,76,000 ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಝರೀನಾ ಎಂಬುವವರು ಮಾ.7 ರಂದು ಬೆಳಿಗ್ಗೆ 10.40 ಸುಮಾರಿಗೆ ಕಲ್ಲೇರಿಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಝರೀನಾ ಬ್ಯಾಗ್ ನಿಂದ‌ ತಲಾ 14 ಗ್ರಾಂ ತೂಕವಿರುವ ಚಿನ್ನದ ಬಳೆಗಳು, 8 ಗ್ರಾಂ ತೂಕದ 1 ಚಿನ್ನದ ಸರ, ತಲಾ 1 ಗ್ರಾಂ ತೂಕದ 2 ಉಂಗುರ, ತಲಾ 1 ಗ್ರಾಂ ತೂಕದ ಮಗುವಿನ ಕಿವಿಯ 1 ಬೆಂಡೋಲೆ ಸೇರಿ ಜೊತೆ ಒಟ್ಟು 44 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ್ದಾರೆ.

ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ.1,76,000/-. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply