ಲೋನ್ ಆಪ್ ಮೂಲಕ ಸಾಲ ಪಡೆದ ಯುವತಿಯ ಅಶ್ಲೀಲ ಫೋಟೋ ಇಟ್ಟು ಹೆಚ್ಚಿನ ಹಣಕ್ಕೆ ಬೇಡಿಕೆ!! ಕರಾವಳಿಯಲ್ಲಿ ಲೋನ್ ಆಪ್ ಗಳದ್ದೇ ಕಾರುಬಾರು-ಬಡ್ಡಿ ಕಟ್ಟಿ ಚಡ್ಡಿ ಜಾರುವ ಮುನ್ನ ಎಚ್ಚೆತ್ತುಕೊಳ್ಳಿ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಸಾಲ ಕೊಡುವವರ ಹಾಗೂ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಲೋನ್ ಆಪ್ ಮೂಲಕ ಸಾಲ ಪಡೆದುಕೊಂಡ ಕೆಲ ಯುವಕರು ತಮ್ಮ ಜೀವವನ್ನೇ ಕಳೆದುಕೊಂಡ ಕೆಲ ಉದಾಹರಣೆಗಳೂ ಇವೆ.
ಇದೆಲ್ಲದರ ನಡುವೆ ಕರಾವಳಿ ಭಾಗದಲ್ಲಿ ಲೋನ್ ಆಪ್ ಮೂಲಕ ಕೆಲ ಯುವತಿಯರೂ ಸಾಲ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಬೆಳಕಿಗೆ ಬಂದಿದೆ. ಇದೆಲ್ಲವಕ್ಕೂ ಸಾಕ್ಷಿ ಎಂಬಂತೆ ಯುವತಿಯೋರ್ವಳು ತನ್ನ ಮನೆಯ ಅಗತ್ಯಕ್ಕಾಗಿ ಲೋನ್ ಆಪ್ ಒಂದರಿಂದ ಹಣ ಪಡೆದುಕೊಂಡಿದ್ದಾಳೆ. ಇದಾಗಿಕೆಲ ದಿನಗಳಲ್ಲಿ ಆಕೆ ಮರು ಪಾವತಿ ಮಾಡಿದ್ದು ಲೋನ್ ಕ್ಲಿಯರ್ ಆಗಿದೆ. ಆ ಬಳಿಕ ಆಕೆಯಿಂದ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಸಲಾಗಿದ್ದು, ಆಕೆಯ ಅಶ್ಲೀಲ ಫೋಟೋ ಪಡೆದು ಸಂಬಂಧಿಕರಿಗೆ, ನೆರೆ ಮನೆಯವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸತ್ತ ಯುವತಿ ಸಿಮ್ ಬದಲಾಯಿಸಿದ್ದು, ಆಕೆಯ ಸಹೋದರಿಗೆ ಬೆದರಿಕೆ ಬರಲಾರಾಂಭಿಸಿದೆ.ಸದ್ಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂತಹ ಲೋನ್ ಆಪ್ ಗಳು ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಗ್ಧ ಜನರನ್ನು ಬುಟ್ಟಿಗೆ ಕೆಡವಿಕೊಂಡು ಲೂಟಿ ನಡೆಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ನಿಗಾ ವಹಿಸದಿದ್ದಲ್ಲಿ ಇನ್ನೂ ಹೆಚ್ಚಿನ ಅನಾಹುತಗಳಿಗೆ, ಜೀವ ಹಾನಿಗೆ ಮಾರ್ಗವಾಗುತ್ತದೆ ಎನ್ನುತ್ತಿದೆ ಸಮಾಜ.