ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಇರುವ ರೈಲು ನಿಲ್ದಾಣವಿದು ! ಇಲ್ಲಿ ಎಲ್ಲಿ ನೋಡಿದರೂ ನಿಮಗೆ ಕಾಣುವುದು ಮಹಿಳೆಯರೇ!
ಮಹಿಳಾ ದಿನಾಚರಣೆ ಇನ್ನೇನು ಹತ್ತಿರ ಬರ್ತಾ ಇದೆ. ಈ ವಿಶೇಷ ದಿನಾಚರಣೆಯ ಅಂಗವಾಗಿ ಒಂದು ಮಾಹಿತಿ ನಿಮಗೆ ನಾವು ಕೊಡುತ್ತೇವೆ. ಇದು ಎಲ್ಲಾ ಮಹಿಳಾಮಣಿಗಳು ಮೆಚ್ಚುವಂತ ವಿಷಯ.
ಆಂಧ್ರಪ್ರದೇಶದ ಚಂದ್ರಗಿರಿಯ ‘ ಮಹಿಳಾ ಚಾಲಿತ ರೈಲು’ ಇಲ್ಲಿ ಪ್ರತಿಯೊಂದು ವಿಭಾಗದಲ್ಲಿ ಕೆಲಸ ನಿರ್ವಹಿಸುವವರು ಮಹಿಳೆಯರೇ. ಇತ್ತೀಚೆಗೆ ಇದು ಭರಪೂರ ಪ್ರಶಂಸೆಯನ್ನು ಪಡೆದುಕೊಂಡಿದೆ.
ದಕ್ಷಿಣ ಮಧ್ಯ ರೈಲ್ವೆಯು 2018 ರಲ್ಲಿ ಕೆಲಸದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನಾಲ್ಕು ರೈಲು ನಿಲ್ದಾಣಗಳನ್ನು ಎಲ್ಲಾ ಮಹಿಳಾ ಉದ್ಯೋಗಿ ನಿಲ್ದಾಣಗಳಾಗಿ ಮಾರ್ಪಡಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ದೂರುಗಳಿಗೆ ಯಾವುದೇ ಆಸ್ಪದ ನೀಡದೇ ಶ್ರದ್ಧೆಯಿಂದ ಕರ್ತವ್ಯ ಮಾಡುತ್ತಿದ್ದಾರೆ ಇಲ್ಲಿನ ಮಹಿಳಾ ಉದ್ಯೋಗಿಗಳು. ಇಲ್ಲಿನ ಪ್ರತಿಯೊಂದು ಕೆಲಸದ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ಕರ್ತವ್ಯ ನಿಭಾಯಿಸಲಾಗುತ್ತದೆ.
ಮಹಿಳೆಯರು ವಾಣಿಜ್ಯ ಮತ್ತು ಸಿಗ್ನಲಿಂಗ್ ವಿಭಾಗಗಳನ್ನು ನಿರ್ವಹಿಸುತ್ತಿದ್ದಾರೆ. ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿರುವ ಚಂದ್ರಗಿರಿ ನಿಲ್ದಾಣವನ್ನು ಒಬ್ಬ ಸೂಪರಿಂಟೆಂಡೆಂಟ್ , ಮೂವರು ಸಹಾಯಕ ಅಧೀಕ್ಷಕರು ಮತ್ತು ಸಹಾಯಕ ಸಿಬ್ಬಂದಿಗಳಾಗಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ನಿಲ್ದಾಣದ ಶುಚಿತ್ವ ಕಾಪಾಡುವುದರ ಜೊತೆಗೆ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳುವವರೆಗೆ ಎಲ್ಲಾ 14 ಇಲಾಖೆಗಳು ಅವುಗಳ ಉಸ್ತುವಾರಿಯನ್ನು ಮಹಿಳೆಯರೇ ನಿಭಾಯಿಸುತ್ತಿದ್ದಾರೆ.
ದೀರ್ಘಕಾಲದವರೆಗೆ ಪುರುಷರ ಪ್ರಾಬಲ್ಯ ಹೊಂದಿರುವ ನಿಯೋಜಿಸಲಾದ ಕರ್ತವ್ಯಗಳನ್ನು ಪೂರೈಸಲು ಸಿಬ್ಬಂದಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ನಿಲ್ದಾಣವನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಜೊತೆಗೆ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ, ಲಿಂಗ ಅಂತರವನ್ನು ಕಡಿಮೆ ಮಾಡುವಲ್ಲಿ ಮಹಿಳೆಯರು ತಮ್ಮ ಉತ್ತಮ ಸೇವೆ ನೀಡುವಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಪಾರುಪತ್ಯ ಮೆರೆದಿದ್ದಾರೆ.