ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಟೀಮ್ ಇಂಡಿಯಾ ನಾರಿಯರು !! | ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲೇ ಭರ್ಜರಿ ಜಯಗಳಿಸಿದ ಭಾರತದ ವನಿತೆಯರ ತಂಡ

ಮಹಿಳಾ ವಿಶ್ವಕಪ್‍ ನಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧದ ಭಾರತ 107 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ. ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ದಾಖಲೆ ನಿರ್ಮಿಸಿದೆ.

 

ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಗ್ ಮಾಡಿದ ಮಾಡಿದ ಭಾರತ 50 ಓವರ್‌ ನಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತ್ತು. 225 ರನ್‍ಗಳ ಬೃಹತ್ ಗುರಿಯನ್ನು ಪಡೆದ ಪಾಕಿಸ್ತಾನ ಕೇವಲ 137 ರನ್‍ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಶೆಫಾಲಿ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಸ್ಮೃತಿ ಮಂಧಾನ, ಸ್ನೇಹಾ ರಾಣಾ, ಪೂಜಾ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಭಾರತದ ನೀಡಿದ 245 ರನ್‍ಗಳ ಬೆನ್ನೆತ್ತಿದ ಪಾಕ್‍ಗೆ ಸಿದ್ರ ಅಮಿನ್(30) ಉತ್ತಮ ಆರಂಭ ಒದಗಿಸಿದರು. ಆದರೆ ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ ಭಾರತದ ದಾಳಿಗೆ ಬೆಚ್ಚಿದ ಪಾಕ್ ತನ್ನೆಲ್ಲಾ ವಿಕೆಟ್‍ನ್ನು ಕಳೆದುಕೊಂಡು ಸೋಲನುಭವಿಸಿತು.

ಭಾರತವು ಪಾಕಿಸ್ತಾನದ ವಿರುದ್ಧ ಏಕದಿನದಲ್ಲಿ ಸತತ 11ನೇ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಎಲ್ಲಾ 11 ಪಂದ್ಯಗಳನ್ನು ಗೆದ್ದಿದೆ. ಇದೇ ಸಂದರ್ಭದಲ್ಲಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವೆ 4 ಪಂದ್ಯಗಳು ನಡೆದಿವೆ. ನಾಲ್ಕೂ ಪಂದ್ಯಗಳಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದೆ.

Leave A Reply

Your email address will not be published.