ಬಂಟ್ವಾಳ : ಮೊಬೈಲ್ ಫೋನಲ್ಲಿ ಮಾತನಾಡುತ್ತಾ ಸ್ಕೂಟಿಯಲ್ಲಿ ಹೊರ ಹೋದ ವ್ಯಕ್ತಿ ನಾಪತ್ತೆ!
ಬಂಟ್ವಾಳ : ಮೊಬೈಲ್ ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ ದ್ವಿಚಕ್ರ ವಾಹನದಲ್ಲಿ ತೆರಳಿದ ಯುವಕನೊಬ್ಬ ಹಿಂತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಸ್ಲೀಂ ಇಬ್ರಾಹಿಂ ( 30) ನಾಪತ್ತೆಯಾದ ಯುವಕ. ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪಂಜಿಕಲ್ಲುವಿನ ಈ ಯುವಕ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕೊರೊನಾ ಕಾಲದಲ್ಲಿ ಊರಿಗೆ ಬಂದಿದ್ದನು.
ಕಳೆದ ಜನವರಿಯಲ್ಲಿ ಮತ್ತೆ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ಹೋದವನು ಫೆ.18 ರಂದು ಮತ್ತೆ ಊರಿಗೆ ವಾಪಾಸಾಗಿದ್ದನು.
ಫೆ. 24 ರಂದು ಮನೆಯಲ್ಲಿ ಊಟ ಮಾಡಿ 2 ಗಂಟೆ ಸುಮಾರಿಗೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ ಆಕ್ಟೀವಾದಲ್ಲಿ ತೆರಳಿದ್ದವನು ಮನೆಗೆ ಹಿಂತಿರುಗಿಲ್ಲ.
ಸಂಬಂಧಿಕರಲ್ಲಿ ವಿಚಾರಿಸಿದಾಗ ಆತ ಪತ್ತೆಯಾಗಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.