ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ| ಯಾವುದೇ ಡಿಗ್ರಿ ಓದಿದವರೂ ಅರ್ಜಿ ಸಲ್ಲಿಸಲು ಅವಕಾಶ| ಮಾಸಿಕ ವೇತನ ರೂ.89,000/-
ಬ್ಯಾಂಕ್ ಆಫ್ ಬರೋಡದಲ್ಲಿ ಯಾವುದೇ ಪದವಿ ಹೊಂದಿದವರಿಗೂ ಉದ್ಯೋಗವಕಾಶಗಳು ಇವೆ. ಇದೀಗ ಬ್ಯಾಂಕ್ ಅಗತ್ಯ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕ ಪ್ರಕಟಣೆ ಹೊರಡಿಸಿದೆ.
ಒಟ್ಟು 105 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ :
ಮ್ಯಾನೇಜರ್ – 15, ಕ್ರೆಡಿಟ್ ಆಫೀಸರ್ ( SMG/S|V) – 25, ಕ್ರೆಡಿಟ್ ಆಫೀಸರ್ ( MMG/S-|||) – 15, ಕ್ರೆಡಿಟ್ ಎಕ್ಸ್ ಪೋರ್ಟ್ ಆಫೀಸರ್ (SMG /S-|V) – 08, ಕ್ರೆಡಿಟ್ ಎಕ್ಸ್ ಪೋರ್ಟ್ ಆಫೀಸರ್ ( MMG / S – |||) – 12, ಫಾರೆಕ್ಸ್ ಆಕ್ವಿಜಿಷನ್ & ರಿಲೇಷನ್ ಷಿಪ್ ಮ್ಯಾನೇಜರ್ ( MMG/ S-|||) – 15, ಫಾರೆಕ್ಸ್ ಆಕ್ವಿಜಿಷನ್ & ರಿಲೇಶನ್ ಷಿಪ್ ಮ್ಯಾನೇಜರ್ ( MMG/ S-||) – 15
ಪ್ರಮುಖ ದಿನಾಂಕ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 04-03-2022
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 24-03-2022
ಅಪ್ಲಿಕೇಶನ್ ತಿದ್ದುಪಡಿಗೆ ಕೊನೆಯ ದಿನಾಂಕ : 24-03-2022
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 08-04-2022
ಆನ್ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 24-03-2022
ವಿದ್ಯಾರ್ಹತೆ : ಮ್ಯಾನೇಜರ್ ಹುದ್ದೆಗಳಿಗೆ : ಡಿಗ್ರಿ/ ಬಿಇ/ಬಿಟೆಕ್/ ಬಿಎಸ್ಸಿ/ ಬಿಸಿಎ/ ಎಂಸಿಎ
ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ : ಯಾವುದೇ ಡಿಗ್ರಿ
ಫಾರೆಕ್ಸ್ – ಅಕ್ವಿಜಿಷನ್ & ರಿಲೇಷನ್ ಷಿಪ್ ಮ್ಯಾನೇಜರ್ ಹುದ್ದೆಗಳಿಗೆ : ಯಾವುದೇ ಡಿಗ್ರಿ/ ಪಿಜಿ ಡಿಗ್ರಿ/ ಮಾರ್ಕೆಟಿಂಗ್ ಮತ್ತು ಸೇಲ್ಸ್ ಡಿಪ್ಲೋಮಾ
ಅರ್ಜಿ ಶುಲ್ಕ : ಸಾಮಾನ್ಯ/ ಒಬಿಸಿ/ ಇಡ್ಬ್ಲುಎಸ್ ಅಭ್ಯರ್ಥಿಗಳಿಗೆ ರೂ.500/-,
ಎಸ್ ಸಿ/ ಎಸ್ ಟಿ/ ಪಿಡ್ಬ್ಲೂಡಿ ಅಭ್ಯರ್ಥಿಗಳಿಗೆ ರೂ.100
ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ