ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಗನ್ ಮ್ಯಾನ್ ಹಿಂಪಡೆತ!

Share the Article

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಧೀಶರ ವಿರುದ್ಧ ನಿಂದನಾರ್ಹ ಪೋಸ್ಟ್ ಹಾಕಿದಂತಹ ‌ನಟ , ಸಾಮಾಜಿಕ ಕಾರ್ಯಕರ್ತ ಚೇತನ್ ಅವರನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಕೂಡಾ ಹೊಂದಿದ್ದರು.

ನ್ಯಾಯಾಂಗ ಬಂಧನದ ಬಳಿಕ ಅವರಿಗೆ ನೀಡಲಾಗಿದ್ದ ಗನ್ ಮ್ಯಾನ್ ವಾಪಾಸ್ ಪಡೆಯಲಾಗಿದೆ. ನಂತರ ಚೇತನ್ ಅವರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಚೇತನ್ ಭೇಟಿ ಮಾಡಿದ ನಂತರ ‘ಗೌರಿ ಲಂಕೇಶ್ ಹತ್ಯೆಯ ಬಳಿಕ ನನಗೆ ಗನ್ ಮ್ಯಾನ್ ನೀಡಲಾಗಿತ್ತು. ಆದರೆ ಈಗ ಅದನ್ನು ಹಿಂಪಡೆಯಲಾಗಿದೆ. ಮೊದಲಿನಿಂದಲೂ ನನಗೆ ಜೀವ ಬೆದರಿಕೆಯಿದೆ. ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

Leave A Reply