ನೀವು ಪ್ರಕೃತಿ ಪ್ರೀಯರೇ? ಪ್ರಕೃತಿಯ ಮಡಿಲಿನಲ್ಲಿ ಮದುವೆ ಆಗುವ ಆಲೋಚನೆಯಲ್ಲಿದ್ದೀರೇ ? | ಹಾಗಿದ್ರೆ ತಪ್ಪದೇ ಇದನ್ನು ಓದಿ !

ಪ್ರಕೃತಿ ಪ್ರಿಯರಾಗಿದ್ದರೆ ನಿಮ್ಮ ಅಥವಾ ನಿಮ್ಮ ಪ್ರಿವೆಡ್ಡಿಂಗ್ ಅಥವಾ ಪೊಸ್ಟ್ ವೆಡ್ಡಿಂಗ್ ಪೋಟೊ ಶೂಟ್ ಗಳನ್ನು ಅಥವಾ ವಿವಾಹವನ್ನು ಗಿರಿಧಾಮಗಳಲ್ಲಿ ಮಾಡಲು ನೀವು ಉತ್ಸುಕರಾಗಿದ್ದರೆ ಇಲ್ಲಿವೆ ಅದ್ಬುತ ಗಿರಿಧಾಮಗಳ ವಿವರ ; ನಿಮ್ಮ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಲು.

ಲೋನಾವಾಲಾ, ಮಹಾರಾಷ್ಟ್ರ: ಪುಣೆ ಮತ್ತು ಮುಂಬೈ ಬಳಿಯಿರುವ ಈ ಆಕರ್ಷಕ ಗಿರಿಧಾಮವು ಹಸಿರಿನಿಂದ ಕೂಡಿದ್ದು ವರ್ಷವಿಡಿ ವಾತಾವರಣವು ಸೊಗಸಾಗಿರುತ್ತದೆ. ಪೋಟೊ ಶೂಟ್ ಮಾಡಲು ಹೇಳಿ ಮಾಡಿಸಿದ ಜಾಗ. ಹಾಗು ಇಲ್ಲಿ ದೊಡ್ಡ ವಿವಾಹಗಳನ್ನು ಆಯೋಜಿಸಲು ಪ್ರಸಿದ್ಧವಾದ ರೆಸಾರ್ಟ್‌ಗಳಿವೆ.

ಮಹಾಬಲೇಶ್ವರ, ಮಹಾರಾಷ್ಟ್ರ : ಸುಡುವ ಶಾಖದಿಂದ ದೂರವಿರುವ ಮಹಾಬಲೇಶ್ವರವು ಹೇಳಿ ಮಾಡಿಸಿದ ಜಾಗ. ಇಲ್ಲಿನ ರಮಣೀಯ ನೋಟ, ಚಳಿಯ ವಾತಾವರಣ ಮದುವೆಗೆ ಮತ್ತು ಪೋಟೊ ಶೂಟ್ ಗಳಿಗೆ ಹೇಳಿ ಮಾಡಿಸಿದ ಜಾಗ.

ಮುನ್ನಾರ್, ಕೇರಳ : ವಾತಾವರಣ ಮತ್ತು ಹವಾಮಾನವು ವರ್ಷವಿಡೀ ಹಿತಕರವಾಗಿರುತ್ತದೆ, ಇಲ್ಲಿಯ ಸುಂದರ ನೋಟ, ಹಿತಕರ ವಾತಾವರಣ ವಿವಾಹವನ್ನು ನಡೆಸಲು, ಪೋಟೊ ಶೂಟ್ ಗೆ ಸೂಕ್ತ ಪ್ರದೇಶವಾಗಿದೆ.

ನಂದಿ ಬೆಟ್ಟ : ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇವಲ 10 ಕಿ.ಮೀ ದೂರವಿದ್ದು, ಮುಂಜಾನೆ ಮೋಡಗಳು ಕೈಗೆಟುಕುವಂತಿದ್ದು, ಪೋಟೊಗಳು ಅದ್ಬುತವಾಗಿ ಬರುತ್ತದೆ.

ಮಡಿಕೇರಿ ;
ಮಡಿಕೇರಿ ತಂಪಾದ ಪ್ರದೇಶವಾಗಿದ್ದು, ಕಾಫಿ ತೋಟದಿಂದ ಆವೃತವಾಗಿದೆ‌ . ಕಾಫಿ ತೋಟಗಳ ನಡುವಿನ ಜೊಡಿ ಪೋಟೊ ಅದ್ಬುತವಾಗಿ ಮೂಡಿಬರುತ್ತದೆ. ಮತ್ತು ಮದುವೆ ಸಮಾರಂಭಗಳಿಗೆ ಇಲ್ಲಿ ಹಲವಾರು ರೆಸಾರ್ಟ್ ಗಳು ಲಭ್ಯವಿದೆ.

ಆಗುಂಬೆ;
ಆಗುಂಬೆಯ ಸೂರ್ಯಾಸ್ತ, ಘಾಟಿಯಲ್ಲಿನ ಹಸಿರು ಪ್ರದೇಶ ಪೋಟೊ ಚಿತ್ರೀಕರಣಕ್ಕೆ ಸೂಕ್ತ ಜಾಗ.

ಅಲಾಪೆ ಕೇರಳ : ಅಲಾಪೆ ಬೋಟ್ ವಸತಿಗೆ ಪ್ರಖ್ಯಾತಿ ಪಡೆದಿದ್ದು, ಸುತ್ತಲೂ ನೀರು ಅದರ ಮಧ್ಯ ಬೋಟ್ ರೇಸಾರ್ಟ್ ಗಳಲ್ಲಿ ಪೋಟೊ ತೆಗೆಯಲು ಅಥವಾ ಮದುವೆ ಕಾರ್ಯಕ್ರಮಗಳು ಜರುಗಲು ಅವಕಾಶಗಳಿವೆ ಮತ್ತು ಸ್ಮರಣೀಯವಾಗಿರುತ್ತದೆ.

Leave A Reply

Your email address will not be published.