ದ್ವಿತೀಯ ಪಿಯುಸಿ ‘ವಾರ್ಷಿಕ ಪರೀಕ್ಷೆ ವೇಳಾಪಟ್ಟಿ’ಯಲ್ಲಿ ಬದಲಾವಣೆ | ನೂತನ ವೇಳಾಪಟ್ಟಿ ಇಲ್ಲಿದೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನಡೆಸುವಂತ ಜೆಇಇ ಪರೀಕ್ಷೆಯ ಮೊದಲ ಸೆಷನ್ ದಿನಾಂಕ 16-04-2022 ರಿಂದ 22-04-2022 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಈ ವೇಳಾಪಟ್ಟಿಯ ದಿನಾಂಕವೇ ದ್ವಿತೀಯ ಪಿಯುಸಿ ವಾರ್ಷಿಕ ವೇಳಾಪಟ್ಟಿಯ ಪರೀಕ್ಷೆ ಕೂಡಾ ನಿಗದಿಯಾಗಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಜೆಇಇ ಪರೀಕ್ಷೆ ಬರೆಯೋದಕ್ಕೆ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯನ್ನು ಪರಿಷ್ಕರಿಸಲಾಗಿದೆ. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ದಿನಾಂಕ 22-04-2022 ರಿಂದ ಆರಂಭಗೊಂಡು ದಿನಾಂಕ 11-05-2022 ರವರೆಗೆ ನಡೆಯಲಿದೆ ಎಂಬುದಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

Leave A Reply

Your email address will not be published.