ಸಸ್ಯಹಾರಿಗಳಿಗಾಗಿಯೇ ತಯಾರಾಗುತ್ತಿದೆಯಂತೆ ಪ್ರತ್ಯೇಕ ಮಾಂಸ !! | ಈ ಪರ್ಯಾಯ ಮಾಂಸದ ಸೃಷ್ಟಿ ಹೇಗೆ ಗೊತ್ತಾ??
ಮಾಂಸಹಾರ ಆರೋಗ್ಯವಾದ ಜೀವನಕ್ಕೆ ಉತ್ತಮವೆಂದೇ ಹೇಳಬಹುದು. ಆದ್ರೆ ಸಸ್ಯಾಹಾರಿಗಳಿಗೆ ಮಾಂಸ ದೂರವೇ ಸರಿ.ಆದ್ರೆ ಇದೀಗ ಸಸ್ಯಾಹಾರಿಗಳಿಗಾಗಿಯೇ ಮಾಂಸ ತಯಾರಿಯಾಗುತ್ತೆ ಅಂತೆ!ಅದೇನು ಮಾಂಸ ಕಂಡೊಡನೆ ದೂರಕ್ಕೆ ಓಡುವವರಿಗೆ ಸಸ್ಯಾಹಾರಿ ಮಾಂಸನ ಎಂಬ ಗೊಂದಲದವರು ಮುಂದೆ ಓದಿ.
ಹೌದು.ತೆಳುವಾದ ಗಾಳಿಯಿಂದಲೇ ಪರ್ಯಾಯ ಮಾಂಸವನ್ನು ಸೃಷ್ಟಿಸಲು ಸಾಧ್ಯವಾಗಿದೆ.ಇದು ನಿಜ ಸುದ್ದಿಯಾಗಿದ್ದು,ಗಾಳಿಯಲ್ಲಿರುವ ಪ್ರೋಟೀನ್ನಿಂದ ಸಸ್ಯಾಹಾರಿಗಳೂ ಪರ್ಯಾಯ ಮಾಂಸಾಹಾರ ಸೇವನೆ ಮಾಡಬಹುದು ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.
ಸಂಸ್ಥೆಯ ಸಹ ಸಂಸ್ಥಾಪಕಿಯಾದ ಡಾ. ಲೀಸಾ ಡೈಸೌನ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞೆಯಾಗಿದ್ದು, ತಮ್ಮ ತಂಡವು ಮಾಂಸಕ್ಕೆ ಪರ್ಯಾಯವನ್ನು ಕಂಡು ಹಿಡಿಯಲು ನೆರವು ನೀಡಿದೆ. ಈ ಪರ್ಯಾಯ ಮಾಂಸವನ್ನು ಸಂಪೂರ್ಣವಾಗಿ ಗಾಳಿಯಿಂದ ಪ್ರೋಟೀನ್ ಅನ್ನು ಹೀರಿಕೊಳ್ಳುವ ಮೂಲಕ ತಯಾರಿಸಲಾಗುತ್ತದೆ. ಪ್ರಾಜೆಕ್ಟ್ ಸಿಒ2 ಎಂದು ಹೆಸರಿಸಲಾಗಿರುವ ಈ ಯೋಜನೆಯಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ಕೆಲವು ಸೂಕ್ಷ್ಮಾಣುಗಳನ್ನು ಬಳಸಿಕೊಂಡು ಅಮೈನೊ ಆಸಿಡ್ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಇದರಿಂದ ಅವರು ಪ್ರೋಟೀನ್ ಪುಡಿಯನ್ನು ಪಡೆಯುತ್ತಾರೆ.
ಈ ಪುಡಿ ಅಥವಾ ಹಿಟ್ಟನ್ನು ಮಾಂಸರಹಿತ ಉತ್ಪನ್ನವನ್ನು ತಯಾರಿಸಲು ಬಳಸಲಾಗುತ್ತದೆ. ಡಾ. ಲೀಸಾ ಪ್ರಕಾರ, ಈ ಹಿಟ್ಟನ್ನು ಇಂಗಾಲದ ಡೈ ಆಕ್ಸೈಡ್ನೊಂದಿಗೆ ತಯಾರಿಸಿದಾಗ ಅದು ಇಂಗಾಲ ರಹಿತವಾಗುತ್ತದೆ. ಇದರರ್ಥ ಈ ಹಿಟ್ಟು ತಿನ್ನಲು ಸಂಪೂರ್ಣ ಸುರಕ್ಷಿತವಾಗಿರುತ್ತದೆ. 1960ರಲ್ಲಿ ನಾಸಾ ಸಂಸ್ಥೆಯು ಗಾಳಿ ಪ್ರೋಟೀನ್ ಕುರಿತು ನಡೆಸಿದ್ದ ಸಂಶೋಧನೆಯಿಂದ ಸ್ಫೂರ್ತಿ ಪಡೆದು ಈ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಈ ಸಂಶೋಧನೆಯಲ್ಲಿ ನಾಸಾ ಸಂಸ್ಥೆಯು ಬಾಹ್ಯಾಕಾಶ ಯಾತ್ರಿಗಳು ಗಾಳಿಯ ಮೂಲಕ ಸ್ವತಃ ಆಹಾರವನ್ನು ತಯಾರಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿತ್ತು.
ಈ ಸಂಶೋಧನೆಯಲ್ಲಿ ನಾಸಾ ಸಂಸ್ಥೆ ಹೈಡ್ರೊಜೆನೊಟ್ರೋಫ್ಸ್ ಎಂಬ ಸೂಕ್ಷ್ಮಾಣುಗಳನ್ನು ಆವಿಷ್ಕರಿಸಿತ್ತು. ಈ ಸೂಕ್ಷ್ಮಾಣುಗಳನ್ನು ಸೂಕ್ತ ಪರಿಸ್ಥಿತಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಸಂಪರ್ಕಕ್ಕೆ ತಂದರೆ, ಅಮೈನೊ ಆಸಿಡ್ ಉತ್ಪತ್ತಿಯಾಗುತ್ತದೆ. ಈ ಉತ್ಪನ್ನದಿಂದ ‘ಏರ್ ಪ್ರೋಟೀನ್’ ಸಂಸ್ಥೆಯು ಸಂಪೂರ್ಣ ಭಿನ್ನವಾದ ಉತ್ಪನ್ನವನ್ನು ತಯಾರಿಸಿದೆ. ಈ ಪ್ರಕ್ರಿಯೆಯನ್ನು ದೊಡ್ಡ ತೊಟ್ಟಿಯಲ್ಲಿ ಸಂಪೂರ್ಣಗೊಳಿಸಲಾಗಿದೆ. ಹುದುಗುವಿಕೆಯ ನಂತರ ಹೊಸ ಉತ್ಪನ್ನವನ್ನು ಪಡೆಯಲಾಗುತ್ತದೆ. ಈ ಮಾಂಸವು ಇತರ ಮಾಂಸಗಳಿಗಿಂತ ಅಗ್ಗವಾಗಿದ್ದು, ಬಾಳಿಕೆ ಬರುವ ಮಾಂಸವಾಗಿದೆ ಎಂದು ಡಾ. ಲೀಸಾ ಪ್ರತಿಪಾದಿಸಿದ್ದಾರೆ.
2019ರಲ್ಲಿ ಸ್ಥಾಪನೆಯಾದ ಕ್ಯಾಲಿಫೋರ್ನಿಯಾ ಮೂಲದ ‘ಏರ್ ಪ್ರೋಟೀನ್’ ನವೋದ್ಯಮ ತೆಳು ಗಾಳಿಯಿಂದ ಮಾಂಸವನ್ನು ಉತ್ಪಾದಿಸುವ ಗುರಿ ಹೊಂದಿತ್ತು. ನಮ್ಮ ಗ್ರಹದ ಹಸಿರು ಮನೆಯನ್ನು ಬಿಸಿಗೊಳಿಸುತ್ತಿರುವ ಅಪಾಯಕಾರಿ ಅನಿಲ ಇಂಗಾಲದ ಡೈ ಆಕ್ಸೈಡ್ ಅನ್ನು ಬಳಸಿಕೊಂಡು ಅದನ್ನು ಸ್ವಾದಿಷ್ಟ ಮಾಂಸವಾಗಿ ಪರಿವರ್ತಿಸುವುದು ಈ ಸಂಸ್ಥೆಯ ಇರಾದೆಯಾಗಿತ್ತು.
‘ಏರ್ ಪ್ರೋಟೀನ್’ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಹೈಡ್ರೊಜೆನೊಟ್ರೊಫಿಕ್ ಸೂಕ್ಷ್ಮಾಣುಗಳನ್ನು ಹುದುಗುವಿಕೆ ತೊಟ್ಟಿಗಳಿಗೆ ಸೇರಿಸಿ, ಅದರೊಂದಿಗೆ ಇಂಗಾಲದ ಡೈ ಆಕ್ಸೈಡ್, ಆಮ್ಲಜನಕ, ಖನಿಜಗಳು, ನೀರು ಮತ್ತು ಸಾರಜನಕವನ್ನು ಬೆರೆಸಲಾಗುತ್ತದೆ. ಇದರ ಕೊನೆಯ ಫಲಿತಾಂಶ ಪ್ರೋಟೀನ್ ಭರಿತ ಹಿಟ್ಟಾಗಿರುತ್ತದೆ. ಈ ಹಿಟ್ಟು ಮಾಂಸ ಹೊಂದಿರುವ ಅಮೈನೊ ಆಸಿಡ್ ವಿವರಗಳನ್ನೇ ಹೋಲುತ್ತದೆ.ಆದರೆ, ಈ ಹಿಟ್ಟನ್ನು ಸಂಸ್ಥೆಯು ಹೇಗೆ ಸ್ವಾದಿಷ್ಟಭರಿತ ಕೋಳಿ ಮಾಂಸವನ್ನಾಗಿ ಪರಿವರ್ತಿಸುತ್ತದೆ? ಈ ಪ್ರಶ್ನೆಗೆ ಉತ್ತರಿಸಿರುವ ಡಾ. ಲೀಸಾ, “ಈ ಹಿಟ್ಟಿಗೆ ನಾವು ಕೇವಲ ಪಾಕಕಲೆಯನ್ನು ಬೆರೆಸಿ, ಗ್ರಾಹಕರು ಬಯಸುವ ವಿವಿಧ ವಿನ್ಯಾಸದ ರೂಪವನ್ನು ನೀಡುತ್ತೇವೆ” ಎನ್ನುತ್ತಾರೆ.