ನ್ಯಾಯಾಂಗ ಬಂಧನದಿಂದ ಬಿಡುಗಡೆ ನಂತರ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ನೀಡಿದ ಹೇಳಿಕೆ ಏನು?
ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅಹಿಂಸಾ ಅವರನ್ನು ಫೆ.16 ರಂದು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ ಕಾರಣಕ್ಕೆ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.
ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ನೀಡಿದ ಕಾರಣಕ್ಕಾಗಿ ಐಪಿಸಿ 505(2) ಹಾಗೂ ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ ( ಐಪಿಸಿ 504) ನೀಡಿದ್ದಾರೆ ಎಂಬ ಆರೋಪದಡಿ ಬಂಧನ ಮಾಡಲಾಗಿತ್ತು.
ಈಗ ಜೈಲಿನಿಂದ ಷರತ್ತುಬದ್ಧ ಜಾಮೀನು ಪಡೆದು ಹೊರಗೆ ಬಂದಿರೋ ನಟ ಚೇತನ್, ಪೊಲೀಸರು ನನ್ನ ವಿರುದ್ಧ ಸುಮೊಟೋ ಕೇಸ್ ಹಾಕಿರುವುದು ಅಸಂವಿಧಾನಿಕವಾಗಿದೆ. ಕಾರಣವೇನೆಂದರೆ, ನನ್ನ ಟ್ವೀಟ್ ನಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆ, ಅವಹೇಳನ ಮಾಡುವಂತದ್ದು ಇರಲಿಲ್ಲ. ಟ್ವೀಟ್ ಗಳನ್ನು ಖಂಡಿತ ನಿಲ್ಲಿಸಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಲು ಎಲ್ಲರಿಗೂ ಹಕ್ಕಿದೆ. ಅದು ಯಾರೇ ಆಗಿರಲಿ ಪ್ರಶ್ನೆ ಮಾಡೇ ಮಾಡ್ತೀನಿ’ ಎಂಬ ಹೇಳಿಕೆ ನೀಡಿದ್ದಾರೆ.