ಅವಳಿ ಮಕ್ಕಳಿಗೆ ಜನ್ಮ ನೀಡಿದ ಮುದ್ದು ಗೊಂಬೆ ನಟಿ ಅಮೂಲ್ಯ !! |ತಂದೆಯಾದ ಸಿಹಿಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪತಿ ಜಗದೀಶ್

Share the Article

ಬಾಲ್ಯದಿಂದಲೇ ನಟಿಯಾಗಿದ್ದ ನಮ್ಮ ಕನ್ನಡ ನಟಿ ಅಮೂಲ್ಯ ಮನೆಯಲ್ಲಿ ತೊಟ್ಟಿಲು ಕಟ್ಟೋ ಸಂಭ್ರಮ. ಹೌದು. ಮುದ್ದಾದ ಬೆಡಗಿ ಅಮೂಲ್ಯ ಇಂದು ಬೆಳಗ್ಗೆ ತಾಯಿಯಾದ ಸಿಹಿ ಸುದ್ದಿಯನ್ನು ಗಂಡ ಜಗದೀಶ್ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ 11.45 ಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳು ಹಾಗೂ ತಾಯಿ ಅಮೂಲ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ .ಇಸ್ಟಾಗ್ರಾಂನಲ್ಲಿ ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರ ‘ದಂಪತಿಗಳ ಈ ಪಯಣದಲ್ಲಿ ಜತೆ ನಿಂತ ಎಲ್ಲರಿಗೆ ತುಂಬು ಹೃದಯದ ಧನ್ಯವಾದ’ಗಳನ್ನು ತಿಳಿಸಿದ್ದಾರೆ.

https://www.instagram.com/p/CajTaQnLldz/?utm_medium=copy_link

ನಟಿ ಅಮೂಲ್ಯ ಅವರು ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 11.45 ಕ್ಕೆ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.ಇನ್ನು , ನಟಿ ಆಶಿಕಾ ರಂಗನಾಥ್ , ನಟಿ ಅದ್ವಿತಿ ಶೆಟ್ಟಿ , ನಟಿ ಹರ್ಷಿಕಾ ಪೂಣಚ್ಚ , ನಟಿ ಸೋನು ಗೌಡ , ಹಾಗೆ ಹಲವಾರು ಸ್ಯಾಂಡಲ್​ವುಡ್ ಮಂದಿ ಈ ಮುದ್ದಾದ ದಂಪತಿಗೆ ಹಾಗೂ ಅವರ ಮಕ್ಕಳಿಗೆ ಶುಭ ಹಾರೈಸಿದ್ದಾರೆ.

Leave A Reply