ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹದಗೆಟ್ಟ ಆರೋಗ್ಯ : ಆಸ್ಪತ್ರೆಗೆ ದಾಖಲು

Share the Article

ಕಳೆದ 2 ತಿಂಗಳಿನಿಂದ ಪಂಜಾಬ್, ಗೋವಾ ಸೇರಿದಂತೆ ಹಲವೆಡೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇದೀಗ ಅನಾರೋಗ್ಯಕ್ಕೀಡಾಗಿದ್ದಾರೆ. ಚುನಾವಣೆ ಪ್ರಚಾರಕ್ಕೆ ತೆರಳಿದ ಪರಿಣಾಮ ಆಹಾರದಲ್ಲಿ ವ್ಯತ್ಯಾಸ ಉಂಟಾಗಿದ್ದು, ಚಿಕಿತ್ಸೆ ಪಡೆಯಲು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಮ್ಮು, ಸಕ್ಕರೆ ಖಾಯಿಲೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ‌.

ಬೆಂಗಳೂರಿನ ಪ್ರಕೃತಿ ಕೇಂದ್ರ ಜಿಂದಾಲ್ ‌ನಲ್ಲಿ ಚಿಕಿತ್ಸೆ ಪಡೆದಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಈ ಬಾರಿ ಕುಟುಂಬ ಸಮೇತರಾಗಿ ಬಂದು ಜಿಂದಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವತ್ತು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿರೋ ಅರವಿಂದ ಕೇಜ್ರಿವಾಲ್ ಇನ್ನು ಒಂದು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಈ ಬಾರಿ ಮಾರ್ಚ್ 7 ರ ವರೆಗೆ ಚಿಕಿತ್ಸೆ ಪಡೆದು ವಾಪಸ್ ಆಗಲಿದ್ದಾರೆ.

Leave A Reply