ಕೊರಗ ಸಮುದಾಯದವರ ಮನೆಗೆ ನುಗ್ಗಿ ಪೊಲೀಸರಿಂದ ಹಲ್ಲೆ ಪ್ರಕರಣ : ಕೊನೆಗೂ ಸಿಕ್ತು ಕೊರಗ ಸಮುದಾಯದವರಿಗೆ ನಿರೀಕ್ಷಣಾ ಜಾಮೀನು
ಬ್ರಹ್ಮಾವರ : ತಾಲೂಕಿನ ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ರಾಜೇಶ್, ಸುದರ್ಶನ್, ಗಣೇಶ್ ಬಾರ್ಕೂರು, ಸಚಿನ್ ಮತ್ತು ಗಿರೀಶ್ ಅವರಿಗೆ ಕುಂದಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಇಲ್ಲಿನ ಚಿಟ್ಟಿಬೆಟ್ಟುವಿನ ರಾಜೇಶ್ ಅವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಡಿ ಜೆ ಸೌಂಡ್ ಹೆಚ್ಚಾಗಿದ್ದಕ್ಕೆ ಸ್ಥಳೀಯರು 112 ಗೆ ಕರೆ ಮಾಡಿ ತಿಳಿಸಿದ್ದು, ಅದರಂತೆ ಕೋಟ ಪೊಲೀಸರು ಬಂದು ಅಂದು ದಾಳಿ ನಡೆಸಿದ್ದರು. ಕೊರಗ ಸಮುದಾಯದವರನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೊರಗ ಸಮುದಾಯದವರು ಅಕ್ರಮವಾಗಿ ಸಭೆ ನಡೆಸಿ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಕೊರಗ ಸಮುದಾಯದ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್ ಇನ್ನೂ ಜಾಮೀನು ಪಡೆದಿರಲಿಲ್ಲ.
ಕುಂದಾಪುರ ಮೂಲದ ವಕೀಲರಾದ ಬನ್ನಾಡಿ ಸೋಮನಾಥ ಹೆಗ್ಡೆ ಮತ್ತು ಶ್ಯಾಮಲಾ ದೇವಾಡಿಗ ಕೊರಗ ಸಮುದಾಯದವರಿಗೆ ಜಾಮೀನು ಪರ ವಾದ ಮಂಡಿಸಿದ್ದರು.