ತಮ್ಮ ಕುಟುಂಬದಿಂದ ದೂರವಾಗಿದ್ದ 21 ಬಾಲಕರನ್ನು ಮತ್ತೆ ತಮ್ಮ ಮನೆಗೆ ಸೇರಿಸಲು ಸೇತುವೆಯಾದ ಆಧಾರ್ ಕಾರ್ಡ್ !! | ಏನಿದು “ಮರಳಿ ಮನೆಗೆ” ಕಥೆ?? ಇಲ್ಲಿದೆ ನೋಡಿ

ತಮ್ಮ ಕುಟುಂಬ ಸದಸ್ಯರಿಂದ ದೂರವಿದ್ದು, ಅವರನ್ನು ಸೇರಲಾಗದೆ ಪರಿತಪಿಸುತ್ತಿದ್ದ 21 ಬಾಲಕರ ಬದುಕಿನಲ್ಲಿ ಹೊಸ ಬೆಳಕೊಂದು ಮೂಡಿದೆ. ಬೆಂಗಳೂರಿನ ಸರ್ಕಾರಿ ಸಂಸ್ಥೆಗಳಲ್ಲಿ ವಾಸಿಸುತ್ತಿದ್ದ 21 ಮಂದಿ ಬಾಲಕರು ಆಧಾರ್ ಕಾರ್ಡ್ ನೆರವಿನಿಂದಾಗಿ ತಮ್ಮ ಕುಟುಂಬ ಸದಸ್ಯರನ್ನು ಸೇರಿದ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ.

 

ಕುಟುಂಬ ಸದಸ್ಯರೊಂದಿಗೆ ಮತ್ತೆ ಸೇರಿದ ಬಾಲಕರು ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ಪೈಕಿ ಕೆಲವರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಮತ್ತೆ ಇನ್ನೂ ಕೆಲವರು ವಾಕ್-ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ರೀತಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬಾಲಕರ ಕುಟುಂಬದ ಮೂಲವನ್ನು ತಿಳಿಯುವುದಕ್ಕೆ ಇದ್ದ ವ್ಯವಸ್ಥೆ ಆಧಾರ್ ಒಂದೇ ಆಗಿತ್ತು. ಈ ಅನಾಥ ಬಾಲಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಐಡಿ ಕಾರ್ಡ್ ಗಳನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿತ್ತು. ಈ ವೇಳೆ ಬಾಲಕರ ಕುಟುಂಬದ ಹಿನ್ನೆಲೆ ತೆರೆದುಕೊಂಡಿವೆ .

26 ಮಂದಿ ಬಾಲಕರನ್ನು ಮೆಜೆಸ್ಟಿಕ್ ನಲ್ಲಿರುವ ಆಧಾರ್ ಸೇವಾ ಕೇಂದ್ರ (ಎಎಸ್ ಕೆ) ಗೆ ಕರೆದೊಯ್ಯಲಾಗಿತ್ತು. ಈ ಪೈಕಿ 21 ಮಂದಿಯ ಅಗತ್ಯ ವಿವರಗಳನ್ನು ಸೆರೆಹಿಡಿಯುವುದು ಕಷ್ಟ ಸಾಧ್ಯವಾಯಿತು ಎಂದು ಯುಐಡಿಎಐ ನ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವಲಸಿ ವ್ಯವಸ್ಥೆ ಕಲ್ಪಿಸಲಾಗಿದ್ದ ಕೇಂದ್ರದಿಂದ ಓರ್ವ ಬಾಲಕನನ್ನು ಕಾರ್ಡ್ ಗಾಗಿ ಕರೆತರಲಾಗಿತ್ತು. ನಮ್ಮ ಸಿಬ್ಬಂದಿಯ ಪೈಕಿ ಇದ್ದ ನಿವೃತ್ತ ವಿಂಗ್ ಕಮಾಂಡರ್ ಜಿ ರಾಜೇಂದ್ರನ್ ಅವರು ಆ ಬಾಲಕನ ಬಯೋಮೆಟ್ರಿಕ್ ನ್ನು ಸೆರೆಹಿಡಿಯಲು ಯತ್ನಿಸಿದರು. ಆದರೆ ಅದಾಗಲೇ ಆ ಬಾಲಕನ ಬಯೋಮೆಟ್ರಿಕ್ ದಾಖಲಾಗಿದ್ದ ಕಾರಣ ಸಿಸ್ಟಮ್ ಬಯೋಮೆಟ್ರಿಕ್ ನ್ನು ಸ್ವೀಕರಿಸಲು ನಿರಾಕರಿಸುತ್ತಿತ್ತು. ತಕ್ಷಣವೇ ಡೇಟಾ ಬೇಸ್ ನ್ನು ಪರಿಶೀಲಿಸಿದಾಗ ಆತನ ಕುಟುಂಬದ ಹಿನ್ನೆಲೆ ತೆರೆದುಕೊಂಡಿತ್ತು. ಆ ಮಾಹಿತಿ ಅಲ್ಲಿಯವರೆಗೂ ಯಾರಿಗೂ ತಿಳಿದಿರಲಿಲ್ಲ ಎಂದು ಯುಐಡಿಎಐ ನ ಉಪ ನಿರ್ದೇಶಕ ಅಶೋಕ್ ಲೆನಿನ್ ಹೇಳಿದ್ದಾರೆ.

ಇದೇ ಮಾದರಿಯಲ್ಲಿ ಉಳಿದ ಬಾಲಕರ ವಿವರಗಳನ್ನೂ ಕಲೆಹಾಕಲಾಯಿತು. ಬಹುತೇಕ ಮಂದಿ ಬಾಲಕರು 15-16 ವರ್ಷದವರಾಗಿದ್ದು, 7 ಮಂದಿ ಬಾಲಕರು ಕರ್ನಾಟಕದವರಾಗಿದ್ದು, ಮೂವರು ಬಿಹಾರ, ಒಡಿಶಾ-ಮಧ್ಯಪ್ರದೇಶದಿಂದ ತಲಾ 2 ಬಾಲಕರು ಛತ್ತೀಸ್ ಗಢ, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳದಿಂದ ತಲಾ 1 ಬಾಲಕ ತಪ್ಪಿಸಿಕೊಂಡಿದ್ದರು.

Leave A Reply

Your email address will not be published.