ಬೆಳ್ತಂಗಡಿ : 18 ವರ್ಷದ ಯುವಕ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ !!! ಪೊಲೀಸ್ ವಿಚಾರಣೆಗೆ ಹೆದರಿದನೇ ಯುವಕ?

ಬೆಳ್ತಂಗಡಿ : 18 ವರ್ಷದ ಯುವಕನ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದೆ. ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

 

ಬ್ಯಾಂಕ್ ಚೆಕ್ ಕೇಸ್ ಗೆ ಸಂಬಂಧಿಸಿದಂತೆ ಮೃತ ಯುವಕ ತಂಝಿಲ್ ಗೆಳೆಯನನ್ನು ಬೆಳ್ತಂಗಡಿ ಪೊಲೀಸರು ವಿಚಾರಣೆಯನ್ನು ನಡೆಸಿದ್ದರು. ಆ ಬಳಿಕ ಮಾತುಕತೆ ಮೂಲಕ ಪ್ರಕರಣ ಮುಗಿದಿತ್ತು. ಆದರೆ ಮಾತುಕತೆ ಬಳಿಕ ಪೊಲೀಸರು ತಂಝೀಲ್ ಗೆಳೆಯನ ಮೊಬೈಲ್ ನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಚೆಕ್ ವಿಷಯಕ್ಕೆ ಸಂಬಂಧಿಸಿ‌ ಪೊಲೀಸರು ನಿನ್ನನ್ನು ಕೂಡಾ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಂಝಿಲ್ ಗೆಳೆಯ ತಂಝಿಲ್ ಗೆ ಹೇಳಿದ್ದಾನೆ. ಇದರಿಂದ ತಂಝಿಲ್ ಭಯಗೊಂಡಿದ್ದ ಎನ್ನಲಾಗಿದೆ.

ನಿನ್ನೆ ಬೆಳಿಗ್ಗೆ ಸಹೋದರಿ ಗರ್ಭಿಣಿಯನ್ನು ಚೆಕ್ ಅಪ್ ಗೆ ತಂಝಿಲ್ ತಾಯಿ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ತಂಝಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌

Leave A Reply

Your email address will not be published.