ಬಂಟ್ವಾಳ : ದಾರಿಹೋಕರಿಗೆ ಜೇನ್ನೊಣ ಕಚ್ಚಿ 9 ಮಂದಿ ಗಂಭೀರ | ಆಸ್ಪತ್ರೆಗೆ ದಾಖಲು
ಬಂಟ್ವಾಳ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಜೇನುನೊಣ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಒಂಭತ್ತು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಕಲಾಬಾಗಿಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಲಾಬಾಗಿಲು ನಿವಾಸಿಗಳಾದ ಗಂಗಯ್ಯ ಗೌಡ ( 60), ಶೀನ ಶೆಟ್ಟಿ ( 48) ಐತಪ್ಪ ಶೆಟ್ಟಿ ( 76) ಅರುಣ್ ಶೆಟ್ಟಿ ( 34), ಲಲಿತಾ ( 49) ಇನ್ನೂ ನಾಲ್ಕು ಮಂದಿಗೆ ಜೇನ್ನೊಣ ಕಚ್ಚಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೀಟಿಂಗ್ ಗೆ ರಸ್ತೆಯಲ್ಲಿ ಜೊತೆಯಾಗಿ ತೆರಳುವ ವೇಳೆ ಜೇನು ನೊಣ ಕಚ್ಚಿದೆ.
ಗಿಡುಗವೊಂದು ನೊಣಗಳ ಗೂಡಿಗೆ ಕಚ್ಚಿದ ಪರಿಣಾಮ ಕೋಪಗೊಂಡ ಜೇನುನೊಣ ದಾರಿಯಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ನಡೆದಿದೆ.
ಜೇನ್ನೊಣ ದಾಳಿಯಿಂದ ತೀವ್ರ ಗಾಯಗೊಂಡವರನ್ನು ಪೂಂಜಾಲಕಟ್ಟೆ ಆಸ್ಪತ್ರೆಯ 108 ಆಂಬ್ಯುಲೆನ್ಸ್ ನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರಿಗೂ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.