ಮಂಗಳೂರು : ಸ್ಮಾರ್ಟ್ ಸಿಟಿ ಆವಾಂತರ | ರಸ್ತೆ ಮಧ್ಯೆ ಅಗೆದಿದ್ದ ಗುಂಡಿಗೆ ಬಿದ್ದ ಕಾರು

ಮಂಗಳೂರು : ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯೊಂದಕ್ಕೆ‌ ಕಾರು ಬಿದ್ದ ಘಟನೆಯೊಂದು ಕೋಡಿಯಾಲ್ ಗುತ್ತು ಬಳಿಯ ಭಗವತಿ ನಗರದಲ್ಲಿ ನಡೆದಿದೆ.

 

ಸ್ಮಾರ್ಟ್ ಸಿಟಿ ಹಿನ್ನೆಲೆ ರಸ್ತೆ ಮಧ್ಯೆ ಅಗೆದಿದ್ದ ಗುಂಡಿ ಇದಾಗಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿಗಾಗಿ ಗುಂಡಿ ಅಗೆಯಲಾಗಿತ್ತು.

ಆದರೆ ಗುಂಡಿಯ ಸುತ್ತಮುತ್ತ ಯಾವುದೇ ಬ್ಯಾರಿಕೇಡ್ ಅಳವಡಿಸದ ಕಾರಣ ಗುಂಡಿಯ ಅರಿವೇ ಇಲ್ಲದೇ ಚಾಲಕನ ಗಾಡಿ ಗುಂಡಿಗೆ ಬಿದ್ದಿದೆ. ಈ ವೇಳೆ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇನ್ನು ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Leave A Reply

Your email address will not be published.