ಬೆಳ್ತಂಗಡಿ : ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದ ಲಾರಿ | ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರು

ಬೆಳ್ತಂಗಡಿ : ಬೃಹತ್ ಗಾತ್ರದ ಲಾರಿಯೊಂದು ಹೊಂಡಕ್ಕೆ ಬಿದ್ದಿರುವ ಘಟನೆಯೊಂದು ಬೆಳಗಿನ ಜಾವ ಸಂಭವಿಸಿದೆ.

 

ಮೂಡಬಿದಿರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಲಾರಿಯೊಂದು ಬೆಳಗಿನ ಜಾವ ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದಿರುವ ಘಟನೆ ಬೆಳ್ತಂಗಡಿ‌ ತಾಲೂಕಿನ ಪಡ್ಯಾರಬೆಟ್ಟು ಸಮೀಪ ನಡೆದಿದೆ.

ಚಾಲಕ ನಿದ್ದೆಗೆ ಜಾರಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನ ಆಂಧ್ರಮೂಲದ್ದು ಎಂದು ತಿಳಿದು ಬಂದಿದೆ.

Leave A Reply

Your email address will not be published.