ಬೆಳ್ತಂಗಡಿ : ದಲಿತ ಕಾರ್ಮಿಕ ದಿನೇಶ್ ಕೊಲೆ ಆರೋಪಿ ಕೃಷ್ಣ ಧರ್ಮಸ್ಥಳ ಬಂಧನ

ಧರ್ಮಸ್ಥಳ : ಕನ್ಯಾಡಿಯ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬುವವರ ಸಾವಿಗೆ ಕಾರಣರಾಗಿದ್ದ ಎಂಬ ಆರೋಪದಡಿ ಬಂದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು, ಆರೋಪಿ ಕನ್ಯಾಡಿಯ ಕಿಟ್ಟ ಯಾನೆ ಕೃಷ್ಣರನ್ನು ಬಂಧಿಸಿದ್ದಾರೆ.

 

ಜಮೀನು ದಾಖಲಾತಿ ವಿಷಯವಾಗಿ ಈ ಇಬ್ಬರ ಮಧ್ಯೆ ವಿವಾದ ನಡೆದಿದ್ದು. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ಯಾಡಿಯ ದಿನೇಶ್ ಎಂಬುವವರು ಸಾವನ್ನಪ್ಪಿದ್ದು, ತನ್ನ ಪುತ್ರನಿಗೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ತಾಯಿ ಪದ್ಮಾವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕೃಷ್ಣನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.